Vanasiri team planted saplings as part of India’s great sportsman Virat Kohli’s birthday
ಸಿಂಧನೂರು: ತಾಲೂಕಿನ ಮಲ್ಲಾಪೂರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಭಾರತ ದೇಶದ ಹೆಮ್ಮೆಯ ಕ್ರೀಡಾಪಟುಗಾರರಾದ ವಿರಾಟ್ ಕೊಹ್ಲಿ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿನೆಡುವ ಕಾರ್ಯಕ್ರಮ ಹಾಗೂ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಭಾರತದ ಶೇಷ್ಠ ಕ್ರಿಕೆಟ್ ಆಟಗಾರ ವಿರಾಟ್ ಕೋಹ್ಲಿ ಅವರ 35ನೇ ಹುಟ್ಟು ಹಬ್ಬದವನ್ನು ಅವರ ಅಭಿಮಾನಿಗಳು ದೇಶದೆಲ್ಲೆಡೆ ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದಾರೆ ಅವರ ಹಾದಿಯಲ್ಲೇ ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕೂಡಾ ಅವರ ಅವರ ಅಭಿಮಾನಿಗಳಾದ ವನಸಿರಿ ಫೌಂಡೇಶನ್ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳ ಸದಸ್ಯರು ಹಾಗೂ ಊರಿನ ಯುವಕರು ಸೇರಿಕೊಂಡ ಅವರ ಸವಿ ನೆನಪಿನ ಹುಟ್ಟು ಹಬ್ಬದ ಅಂಗವಾಗಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿನೆಟ್ಟು ನೀರುಣಿಸಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡರು ಈ ಕಾರ್ಯಕ್ಕೆ ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಗ್ರಾಮದ ಯುವಕರಾದ ಆಕಾಶ,ಸುಧಾಕರ, ಮಲ್ಲಿಕಾರ್ಜುನ H, ರಮೇಶ, ಬಸವಲಿಂಗ,ಮೌನೇಶ, ಶ್ರೀನಿವಾಸ್ ನಾಯಕ,ಮಹೇಶ, ಸಿದ್ದಲಿಂಗಪ್ಪ,ನಿಂಗರಾಜ ಕೆ, ಅಂಬರೀಶ ಕೆ,ವೀರೇಶ ಹಾಲುಮತ ಊರಿನ ಹಿರಿಯರು ಯುವಕರು ಉಪಸ್ಥಿತರಿದ್ದರು.
ವರದಿ:- ಚನ್ನಪ್ಪ ಕೆ.ಹೊಸಹಳ್ಳಿ