Rewards encourage talented children: MLA Janardhan Ruddy

ಗಂಗಾವತಿ:ಕಿತ್ತೂರಿ ರಾಣಿ ಚೆನ್ನಮ್ಮ ನವರ ಧೈರ್ಯ ಶೌರ್ಯ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದಲ್ಲಿ ಪಂಚಮಸಾಲಿ ತಾಲೂಕು ಸಮಿತಿ ಹಾಗೂ ಹಿರೇ ಜಂತಗಲ್ ಗ್ರಾಮ ಸಮಿತಿಯ ಸಹಯೋಗದೊಂದಿಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ತಾಲೂಕ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮಳ 245 ನೇ ಜಯಂತೋತ್ಸವ ಹಾಗೂ 200ನೇ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮನವರು ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರಾಗಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ನಾಡು ನುಡಿಗಾಗಿ ಶ್ರಮಿಸಿದವರು. ಅವರ ತತ್ವ ಸಿದ್ದಾಂತವು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಮಾಜಕ್ಕೆ ಅವರದೇ ಅದ ಕೊಡುಗೆ ನೀಡಿದ್ದಾರೆ. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಮೂಲಕ ಪ್ರೋತ್ಸಾಹಿಸುವುದು ಉತ್ತಮ ಕಾರ್ಯವಾಗಿದೆ ಎಂದರು.
ಇದ್ದಕ್ಕೂ ಮೊದಲು ನಗರದ ಕೋರ್ಟ್ ಎದುರುಗಡೆ ಇರುವ ಕೊಟ್ಟೂರು ಸ್ವಾಮಿಯ ಮಠದಿಂದ ಕುಂಭೋತ್ಸವ, ವಿವಿಧ ಕಲಾತಂಡಗಳು ಜೊತೆಗೆ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದೊಂದಿಗೆ ಪೂಜ್ಯ ಗುರುಗಳ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಆರ್.ಶ್ರೀನಾಥ್, ಸಮಾಜದ ಅಧ್ಯಕ್ಷ ಶಿವಪ್ಪ ಯಲಬುರ್ಗಾ,
ಕಾರ್ಯದರ್ಶಿ ಸುಭಾಷ್ ಚಂದ್ರ ತಿಪ್ಪಶೆಟ್ಟಿ,ಬಸವನಗೌಡ,ಆರ್.ದೇವಾನಂದ್,ಬಗರ ಹುಕಂ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ, ಚನ್ನವೀರಗೌಡ,
ಮಾಜಿ ನಗರಪ್ರಾಧಿಕಾರ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ,
ವೀರೇಶ ಬೆಣಕಲ್,ವಿರೇಶ ಸುಳೇಕಲ್,ಬಸವರಾಜ ಕೋರಿ,ಮಹೇಶ ಡೈವರ್,ಗವಿಸಿದ್ದಪ್ಪಆರಾಳ, ವಿನಯಕುಮಾರ ಪಾಟೀಲ್,
ಮಂಜುನಾಥ ಸುಳೇಕಲ್, ಮನೋಹರಗೌಡ ಹೇರೂರು ಶಂಕರ್ ಬಾಳೇಕಾಯಿ, ಹೊಸಮಲಿ ರಮೇಶ್ ನಾಯಕ ಸೇರಿದಂತೆ ಇತರರು ಇದ್ದರು