Organizations are the strength of every community: MLA MR Manjunath.
ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ನಾವು ಆಚರಿಸುತ್ತಿರುವ ವಾಲ್ಮೀಕಿ ಜಯಂತಿ ಭೂಮಿಯ ಮೇಲೆ ನಾವು ಇರುವವರೆಗೂ ಅವರ ಗ್ರಂಥ ಹಜರಾಮರವಾಗಿದೆ ,ಈ ಸಮುದಾಯವು ಸಹ ಇತರೆ ಸಮುದಾಯಗಳಂತೆ ಮುಖ್ಯ ವಾಹನಿಗೆ ಬರಬೇಕು ಎಂದು ಶಾಸಕ ಎಂಆರ್ ಮಂಜುನಾಥ್ ತಿಳಿಸಿದರು .
ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದಿಂದ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು
ಸರ್ವಕಾಲಿಕ ರಾಮಾಯಣ ಅತ್ಯಂತ ಪ್ರಮುಖ ಸಂಸ್ಕೃತ ಭಾಷೆಯ ಆದಿಕವಿ ಗ್ರಂಥ ರಾಮಾಯಣ ರಚಿಸಿದ ವಾಲ್ಮೀಕಿ ಇತಿಹಾಸ ಲೇಖನಗಳು ಇತಿಹಾಸ ಪುಟಗಳಲ್ಲಿ ಸಾರಿ ಹೇಳುತ್ತಿದೆ ಎಂದರು. ಹಾಗೂ ಹನೂರು ಪಟ್ಟಣದಲ್ಲಿ ವಿಜೃಂಭಣೆಯಿಂದ ಇಂದು ಸಮುದಾಯದವರು ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ ಪ್ರತಿಯೊಬ್ಬರು ಸಮಾಜದ ಏಳಿಗೆಗಾಗಿ ದುಡಿದ ಮತ್ತು ಮಹಾನು ಗ್ರಂಥ ರಚನೆ ಮಾಡಿದ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಸಮುದಾಯದ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಜೊತೆಗೆ ರಾಜಕೀಯವಾಗಿ ಗ್ರಾಮ ಮತ್ತು ತಾಲೂಕು ಜಿಲ್ಲೆ ಹಾಗೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರತಿಯೊಬ್ಬರು ಗುರುತಿಸಿಕೊಳ್ಳುವ ಮೂಲಕ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸುವ ಮೂಲಕ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಬೆಳಗಾವಿ ಸಾಹುಕಾರರು ರಾಜಕೀಯ ಚಿತ್ರಣವನ್ನೇ ಬದಲಾವಣೆ ಮಾಡುವ ರಾಜಕೀಯ ಚತುರರು ಹೀಗಾಗಿ ಶೋಷಿತ ವರ್ಗದ ಸಣ್ಣಪುಟ್ಟ ಸಮುದಾಯಗಳಲ್ಲಿ ಅವಶ್ಯಕತೆ ಇರುವ ಸಮುದಾಯದವರು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವುದರ ಮೂಲಕ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಹೀಗಾಗಿ ಇಂದು ನನಗೆ ನೀಡಿರುವ ಮನವಿಯನ್ನು ಮುಂದಿನ ವಾಲ್ಮೀಕಿ ಜಯಂತಿಯ ಒಳಗೆ ಬಗೆಹರಿಸಲು ಶ್ರಮಿಸುತ್ತೇನೆ ನನಗೆ ನೀಡಿರುವ ಅವಕಾಶವನ್ನು ಬಳಸಿಕೊಂಡು ತಮ್ಮ ಸೇವೆ ಮಾಡಲು ಇದೊಂದು ಸುವರ್ಣ ಅವಕಾಶ ನನಗೆ ಸಿಕ್ಕಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನುಅರ್ಹ ಪಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಆಚರಣಾ ಸಮಿತಿ ಅಧ್ಯಕ್ಷರಾದ ಪುಟ್ಟವೀರ ನಾಯಕ , ಮುಖ್ಯ ಭಾಷಣಕಾರ ರಾದಾ ಉದ್ದನೂರು ಮಹಾದೇವ್ , ಕೊಳ್ಳೆಗಾಲ ನಾಯಕ ಜನಾಂಗದ ಅಧ್ಯಕ್ಷ ಜಗದೀಶ್ , ದೇವಪ್ಪನಾಯಕ,ಸೋಮಣ್ಣ,ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಶ್ ಸಮುದಾಯದ ಮುಖಂಡರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು ….