Ashokaswamy Heroor’s call to obey religion in profession
ಗಂಗಾವತಿ:ವೃತ್ತಿಯಲ್ಲಿ ಧರ್ಮವನ್ನು ಪಾಲಿಸಬೇಕು ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ಸದ್ರಿ ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಕರೆ ನೀಡಿದರು.
ಶನಿವಾರ ನಗರದ ಔಷಧೀಯ ಭವನದಲ್ಲಿ ಕನ್ನಡ ರಾಜ್ಯೊತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಔಷಧ ವ್ಯಾಪಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಡಿಮೆ ಬೆಲೆಯಲ್ಲಿ ರೋಗಿಗಳಿಗೆ ಔಷಧ ಸರಬರಾಜು ಮಾಡುವ ನಿಟ್ಟಿನಲ್ಲಿ ಔಷಧ ವ್ಯಾಪಾರಿಗಳು ಮತ್ತು ಔಷಧ ತಜ್ಞರು ಶ್ರಮಿಸಬೇಕು,ಈ ನಿಟ್ಟಿನಲ್ಲಿ ಜನರಿಕ್ ಔಷಧಗಳ ಬಳಕೆಯ ಬಗ್ಗೆ ಔಷಧ ವ್ಯಾಪಾರಿಗಳು ಚಿಂತಿಸಬೇಕೆಂದು ತಿಳಿಸಿದರು.
ಜನೌಷಧಿ ಕೇಂದ್ರಗಳ ಸಹಾಯ ಪಡೆಯಲು ವ್ಯಾಪಾರಿಗಳು ಚಿಂತಿಸಿದರೆ,ಅಂತಹ ಕೇಂದ್ರಗಳಿಂದ ವ್ಯಾಪಾರಿಗಳಿಗೆ ರಿಯಾಯಿತಿ ಕೊಡಿಸುವುದಾಗಿ ಹೇರೂರ ಭರವಸೆ ನೀಡಿದರು.
ವ್ಯಾಪಾರದಲ್ಲಿ ದಯೆ ಮತ್ತು ಕರುಣೆ ಎಂಬ ಪದಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಔಷಧ ವ್ಯಾಪಾರಿಗಳು,ರೋಗಿಗಳ ಬಗ್ಗೆ ಕಾಳಜಿವಹಿಸಿ ಉಪಕಾರ ಮಾಡುವ ಕಾರ್ಯಗಳತ್ತ ಗಮನ ಹರಿಸಬೇಕೆಂದು ಅವರು ಸೂಚಿಸಿದರು.
ಈ ಸಂಧರ್ಭದಲ್ಲಿ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಖಜಾನೆ ಅಧಿಕಾರಿ ಎ.ಎಮ್.ಮದರಿಯವರನ್ನು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪರವಾಗಿ ಅಶೋಕಸ್ವಾಮಿ ಹೇರೂರ ಸನ್ಮಾನಿಸಿ ಗೌರವಿಸಿದರು.ಮದರಿಯವರು ಮಾತನಾಡಿ,ಸಂಘದ ಕ್ರೀಯಾ ಶೀಲ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
‘ಇದು ನಮ್ಮ ಪಂಚಾಯತಿ ಸುದ್ದಿ’ ಪತ್ರಿಕೆಯ ಸಹ ಸಂಪಾದಕರಾದ ಸಿಂಧನೂರು ನಗರದ ವಿರೇಶ್ ಎಸ್.ಎನ್.ಅವರ ಪತ್ರಿಕಾರಂಗದ ಸೇವೆಯನ್ನು ಗುರುತಿಸಿ,ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಗಂಗಾವತಿ-ಕನಕಗಿರಿ-ಕಾರಟಗಿ ಸಂಯುಕ್ತ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕಾರಟಗಿಯ ವೀರಣ್ಣ ಕಾರಂಜಿ,ನಿರ್ದೇಶಕ ಅಮರೇಶ್ ಅರಳಿ,ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ನಿರ್ದೇಶಕ ಮಂಜುನಾಥ ಸುಳೇಕಲ್,ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಲೋಹಿತ್ ಐಲಿ, ಕೇವಾ ಆಯುರ್ವೇದ ಕಂಪನಿಯ ನಿರ್ದೇಶಕರಾದ ವಿಜಯ ಕುಮಾರ್ ಮತ್ತು ಅಜಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.