Breaking News

ಕೊಪ್ಪಳ ಪೋಕ್ಸೋ ನ್ಯಾಯಾಲಯದಲ್ಲಿ ವಿವಿಧಹುದ್ದೆಗಳು:ಮಾನವಸಂಪನ್ಮೂಲಪೂರೈಕೆದಾರರಿಂದ ಟೆಂಡರ್/ಕೊಟೇಶನ್ ಆಹ್ವಾನ

Various Posts in Koppal POCSO Court: Invitation of Tender/Quotation from HR Providers

ಜಾಹೀರಾತು

ಕೊಪ್ಪಳ ನವೆಂಬರ್ 03 (ಕರ್ನಾಟಕ ವಾರ್ತೆ): ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಎಫ್‌ಟಿಎಸ್‌ಸಿ-1(ಪೋಕ್ಸೋ ನ್ಯಾಯಾಲಯ) ಕೊಪ್ಪಳ ಕಾರ್ಯಾಲಯದಲ್ಲಿ 4 ವಿವಿಧ ಕೇಡರ್‌ಗಳ ಹುದ್ದೆಗಳನ್ನು ಮಾನವ ಸಂಪನ್ಮೂಲ ಸಂಸ್ಥೆಗಳಿAದ ನಿರ್ವಹಿಸಲು ಅಧಿಕೃತ ಸೇವಾ ಪೂರೈಕೆದಾರರು/ಮಾನವ ಸಂಪನ್ಮೂಲ ಪೂರೈಕೆ ಏಜೆನ್ಸಿದಾರರಿಂದ ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಕೊಟೇಶನ್‌ಗಳನ್ನು ಆಹ್ವಾನಿಸಲಾಗಿದೆ.
02 ಟೈಪಿಸ್ಟ್ ಹುದ್ದೆಗಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯೊಂದಿಗೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಸೀನಿಯರ್ ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. 01 ಅಟೆಂಡರ್ ಹಾಗೂ 01 ಜವಾನ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು ಎನ್ನುವ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ಈಗಾಗಲೇ ಈ ರೀತಿಯ ವಿವಿಧ ಸೇವೆಗಳನ್ನು/ಮಾನವ ಸಂಪನ್ಮೂಲವನ್ನು ಒದಗಿಸಿದ ಅನುಭವ ಹೊಂದಿರುವ ಸೇವಾ ಪೂರೈಕೆದಾರರು ಮಾತ್ರ ಟೆಂಡರ್ ಮತ್ತು ಕೊಟೇಶನ್ ಸಲ್ಲಿಸಬೇಕು. ಇದಕ್ಕೆ ಸಂಬAಧಿಸಿದAತೆ ಹೊರಡಿಸಿದ ಅಧಿಸೂಚನೆಯೊಂದಿಗೆ ಅಳವಡಿಸಿದ, ನಿಗದಿತ ನಮೂನೆ ಅನುಬಂಧ-1 ಟೆಂಡರ್ ಫಾರಂ ಭಾಗ-ಎ (ತಾಂತ್ರಿಕ ಬಿಡ್ ಚೆಕ್ ಲಿಸ್ಟ್) ಮೂಲಕ ಕೊಟೇಶನ್ ಸಲ್ಲಿಸಬೇಕು. ಸೇವಾ ಪೂರೈಕೆದಾರರು ಕೊಟೇಶನ್‌ನಲ್ಲಿ ಇ.ಎಂ.ಡಿ ಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರ ಹೆಸರಿನಲ್ಲಿ ಡಿಡಿ ರೂಪದಲ್ಲಿ ಸಲ್ಲಿಸಬೇಕು. ಕಚೇರಿ ಅವಧಿಯು ಬೆಳಿಗ್ಗೆ 10 ಗಂಟೆಯಿAದ ಸಂಜೆ 06 ಗಂಟೆಯವರೆಗೂ ಇದ್ದು, ಅಗತ್ಯ ಸಂದರ್ಭಗಳಲ್ಲಿ ನೌಕರರು ಹೆಚ್ಚುವರಿ ಸಮಯ ಹಾಗೂ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದರಿರಬೇಕು. ಸೇವಾ ಪೂರೈಕೆದಾರರು ಹುದ್ದೆಗೆ ನಿಗದಿ ಪಡಿಸಿದ ಸಮವಸ್ತç ಹಾಗೂ ಗುರುತಿನ ಚೀಟಿ ಸಹಿತ ಮಾನವ ಸಂಪನ್ಮೂಲವನ್ನು ಒದಗಿಸಬೇಕು.
ಕೊಟೇಶನ್‌ಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಲಕೋಟೆಯ ಮೇಲೆ ಸ್ಪಷ್ಟವಾಗಿ ಮಾನವ ಸಂಪನ್ಮೂಲ ಸೇವೆ ಪೂರೈಕೆಗಾಗಿ ಟೆಂಡರ್/ಕೊಟೇಶನ್ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಎಫ್‌ಟಿಎಸ್‌ಸಿ-1(ಪೋಕ್ಸೋ ನ್ಯಾಯಾಲಯ) ಕೊಪ್ಪಳ ಎಂದು ನಮೂದಿಸಬೇಕು.
ಕೊಟೇಶನ್‌ಗಳನ್ನು ಸಲ್ಲಿಸಲು ನವೆಂಬರ್ 09 ಕೊನೆಯ ದಿನವಾಗಿದ್ದು, ಅಂದು ಸಂಜೆ 05 ಗಂಟೆಯೊಳಗಾಗಿ ಟೆಂಡರ್‌ಗಳನ್ನು ಸಲ್ಲಿಸಬೇಕು. ಸಂಜೆ 05.30 ಗಂಟೆಗೆ ಟೆಂಡರ್‌ಗಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಾರ್ಯಾಲಯದಲ್ಲಿ ಟೆಂಡರ್ ಪೂರೈಕೆದಾರರು ಅಥವಾ ಅವರನ್ನು ಪ್ರತಿನಿಧಿಸುವರ ಸಮ್ಮುಖದಲ್ಲಿ ತೆರೆಯಲಾಗುವುದು.
ಸದರಿ ವಿವಿಧ ಹುದ್ದೆಗಳಿಗೆ ಸಂಬAಧಿಸಿದ ವಿದ್ಯಾರ್ಹತೆ ಮತ್ತು ಇನ್ನೀತರ ಮಾಹಿತಿಯನ್ನು ಮತ್ತು ಪೂರ್ಣ ಪ್ರಮಾಣದ ಷರತ್ತುಗಳು ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ ಇಲ್ಲಿಗೆ ಸಂಪರ್ಕಿಸಬಹುದು ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.