Let’s fight corruption – let’s be loyal to the nation
ಗಂಗಾವತಿ: ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಭ್ರಷ್ಟಾಚಾರಗಳಿಗೆ ಕಾರಣ ಎಂದು K L E ಪಿ ಯು ಮತ್ತು ಪದವಿ ಕಾಲೇಜಿನ ಪ್ರಾಚಾರ್ಯರಾದ ಎಸ್ ಸಿ ಪಾಟೀಲ್ ರವರು ಇಂದು ಕಾಲೇಜಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರ ಗಂಗಾವತಿ ಇವರ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹದ ಐದನೇ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು*
*ಶಿಸ್ತು, ಕರ್ತವ್ಯ, ಪ್ರಾಮಾಣಿಕತೆಯ ಸೇವಾ ಮನೋಭಾವಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಭ್ರಷ್ಟಾಚಾರವು ಸೇರಿದಂತೆ ಅನೇಕ ಪಿಡುಗುಗಳು ವ್ಯಕ್ತಿ ಮತ್ತು ಸಮಾಜವನ್ನು ನಾಶ ಮಾಡಬಹುದು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು*
*ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯ ರವರು ಕಾರ್ಯಕ್ರಮದ ಐದನೇ ದಿನದ ಜಾಗೃತಿ ಸಪ್ತಾಹದ ಅಂಗವಾಗಿ K L E ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭ್ರಷ್ಟಾಚಾರಗಳ ಕುರಿತು, ಅನ್ಯ ಮಾರ್ಗಗಳಿಂದ ಲಾಭ ಪಡೆದುಕೊಳ್ಳುವದಿದ್ದರೆ ಅದು ಭ್ರಷ್ಟಾಚಾರ*
ಪ್ರತಿಪಾಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಭ್ರಷ್ಟಾಚಾರವನ್ನು ನಿವಾರಿಸಬಹುದು. ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರ ಪಾತ್ರ ದೊಡ್ಡದು. ವಿದ್ಯಾಭ್ಯಾಸ ಕೊರತೆ, ಬಡತನ, ಪ್ರಚಾರ ಪ್ರಿಯತೆ, ಸ್ವಾತಂತ್ರ್ಯ ತನಿಖಾ ಆಯೋಗದ ಕೊರತೆ, ಇವುಗಳೆಲ್ಲ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗುತ್ತವೆ. ಸೇವಾ ಮನೋಭಾವದಿಂದ ಕೆಲಸ ಮಾಡುವವರು ಹೆಚ್ಚಾದಂತೆ ಭ್ರಷ್ಟಾಚಾರ ಇಳಿಮುಖ ವಾಗಬಹುದು ಎಂದು ತಿಳಿಸಿದರು.
2023ರ ವರ್ಷದ ಜಾಗೃತಿ ಆಯೋಗದ ಘೋಷಣೆಯಂತೆ ಎಲ್ಲಾ ವಿದ್ಯಾರ್ಥಿಗಳಿಂದ– ಭ್ರಷ್ಟಾಚಾರ ವಿರೋಧಿಸೋಣ— ರಾಷ್ಟ್ರಕ್ಕೆ ಭದ್ಧರಾಗಿರೋಣ ಎಂದು ಪ್ರತಿಜ್ಞೆ ಪಡೆಯಲಾಯಿತು
ಈ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ KLE ಕಾಲೇಜ್ ಪ್ರಾಚಾರ್ಯರಾದ ಎಸ್. ಸಿ. ಪಾಟೀಲ್, ಉಪನ್ಯಾಸಕರುಗಳಾದ ಶ್ಯಾಮಸಿಂಗ, ಮಂಜುನಾಥ, , ಶ್ರೀದೇವಿ, ಜೈಬುನ್ನೀಸ, ಸಣ್ಣ ಭೀಮಪ್ಪ ಮತ್ತು ಇನ್ನಿತರ ಕಾಲೇಜು ಸಿಬ್ಬಂದಿಗಳು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು