MLA M R Manjunath requested to make good use of the privileges received by the animal department
ಹನೂರು : ರಾಸುಗಳಿಗೆ ಮೆವು ಕತ್ತರಿಸುವ ಯಂತ್ರವನ್ನು ರೈತರಿಗೆ ಶಾಸರಾದ ಎಂ. ಆರ್. ಮಂಜುನಾಥ್ ವಿತರಣೆ ಮಾಡಿದರು.
ಹನೂರು ಪಟ್ಟಣದ ಪಶು ಚಿಕಿತ್ಸಾ ಕೇಂದ್ರ ಮುಂಭಾಗ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಶಾಸಕ ಎಂ. ಆರ್. ಮಂಜುನಾಥ್ ವಿತರಣೆ ಮಾಡಿದ ನಂತರ ಮಾತನಾಡಿದ
ಅವರು ರೈತರಿಗೆ ಪ್ರಥಮ ಆದಾಯ ಎಂದರೆ ಹೈನುಗಾರಿಕೆ ಹೀಗಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹ ಪಲಾನುಭವಿಗಳು ಪಡೆದುಕೊಳ್ಳುವಂತಾಗಬೇಕು
ಹಸುಗಳ ಆರೋಗ್ಯ ಹಿತ ದೃಷ್ಟಿಯಿಂದ ಕೆಲವು ಪರಿಕರಗಳನ್ನು ಅರ್ಹ ರೈತ ಪಲಾನುಭವಿಗಳಿಗೆ ನೀಡಲಾಗುತ್ತಿದೆ ಈ ಮೇವು ಕತ್ತರಿಸುವ ಯಂತ್ರ ಸುಲಭ ಹಾಗೂ ಅನುಕೂಲವಾಗಿದೆ. ಈ ಭಾಗದಲ್ಲಿ ಹೆಚ್ಚು ನಾಟಿ ತಳಿ ಇದ್ದು ಇನ್ನು 7 ಪಶು ಚಿಕಿತ್ಸ ಕೇಂದ್ರ ಅಗತ್ಯವಾಗಿದೆ ಜೊತೆಗೆ ಸಿಬ್ಬಂದಿ ವೈದ್ಯರ ಕೊರೆತೆ ಸಹ ಇದೆ ಈಡೇರಿಸುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ ಅಲ್ಲದೆ ,ಗ್ರಾಮೀಣ ಪ್ರದೇಶದಲ್ಲಿ ಮಳೆ ಕೊರೆತೆ ಎದುರಾಗಿದ್ದು, ಕಾಡಂಚಿನಲ್ಲಿ ಸಮಸ್ಯೆ ಉಂಟಾಗುತ್ತಿದೆ ಹೀಗಾಗಿ ಜಾನುವಾರುಗಳಿಗೆ ಮೇವು ಕೊರೆತೆ ಆಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಮೇವಿನ ವಿಚಾರಕ್ಕೆ ಸಹಕಾರ ನೀಡಬೇಕಿದೆ ಅಲ್ಲದೆ ಸರ್ಕಾರ ಆದೇಶದಂತೆ ಗೋ ಶಾಲೆ ತೆರೆಯಲು ಕ್ರಮವಹಿಸಲಾಗುವುದು ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು 65ಸಾವಿರ ಲೀ ಉತ್ಪಾದನೆ ಮಾಡುತ್ತಿದ್ದಾರೆ ಇನ್ನಷ್ಟು ಹೈನುಗಾರಿಕೆಕ್ಕೆ ಉತ್ತೇಜನ ನೀಡಲು ಮಾಹಿತಿ ಅಗತ್ಯವಾಗಿದೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರಲ್ಲದೆ ಉತ್ಪತ್ತಿಯಾಗುವ ಹಾಲು ಸ್ಥಳೀಯ ಮಟ್ಟದಲ್ಲೇ ಎಂದರು.ಇದೇ ಸಮಯದಲ್ಲಿ ಅಧಿಕಾರಿಗಳು ಹಾಗೂ ಇನ್ನಿತರರು ಹಾಜರಿದ್ದರು.