Community oriented school program at Nandawadagi School

ನಂದವಾಡಗಿ : ೨೦೨೩-೨೪ ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಸ ಹೆ ಮ ಹಿ ಪ್ರಾ ಶಾಲೆ ನಂದವಾಡಗಿಯಲ್ಲಿ ಯಶಸ್ವಿಯಾಗಿ ಜರುಗಿತು.
ಮಗುವಿನ ಕಲಿಕಾ ಮಟ್ಟ, ಶಾಲೆಗೆ ಸಮುದಾಯದ ಕೊಡುಗೆ, ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮಹತ್ವ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಗುರುತಿಸುವಿಕೆ ಕಾರ್ಯಕ್ರಮದ ಉದ್ದೇಶವಾಗಿದೆ. ಶಾಲೆಗೆ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಧಿಕಾರಿಗಳಾಗಿ ಆಗಮಿಸಿದ ಶ್ರೀಮತಿ ಬಿ ಆಯ್ ಈಟ್ನಳ್ಳಿ ಸರಕಾರಿ ಪ್ರೌಢಶಾಲೆಯ ನಂದವಾಡಗಿ ಇವರು ಶಿಕ್ಷಕರ ದಾಖಲೆಗಳು, ತರಗತಿ ವೀಕ್ಷಣೆ, ಬಿಸಿಯೂಟ ವ್ಯವಸ್ಥೆ, ಮಕ್ಕಳ ಹಾಜರಾತಿ ಬಗ್ಗೆ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು. ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ನಿರಂತರ ನವೀನ ಚಟುವಟಿಕೆ ಹಾಗೂ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಬಗ್ಗೆ ಮಾಹಿತಿ ಹಂಚಿಕೊಂಡರು. ಪಾಲಕರ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಕ್ಕಳ ಕಲಿಕಾ ಸಾಧನೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಶಾಲೆಯು ಉತ್ತಮವಾಗಿ ಪ್ರಗತಿ ಹೊಂದಲು ಸಮುದಾಯದ ಭಾಗಿತ್ವ ಬಹಳ ಮುಖ್ಯ. ಶಾಲೆಯಲ್ಲಿ ನಡೆಯಲಿರುವ ನಿರಂತರ ಕಲಿಕಾ ಚಟುವಟಿಕೆ ಹಾಗೂ ಸಹ ಪಠ್ಯ ಚಟುವಟಿಕೆಗೆ ಮೆಚ್ಚುಗೆ ಸೂಚಿಸಿದರು.ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಅಧಿಕಾರಿಗಳಾಗಿ ಶ್ರೀಮತಿ ಬದಾಮಿ ಗುರುಮಾತೆ ಮಕ್ಕಳ ಕಲಿಕಾ ಬೆಳವಣಿಗೆಗೆ ಬುನಾದಿ ಶಿಕ್ಷಣ ಅವಶ್ಯ, ಉತ್ತಮ ರೀತಿಯಲ್ಲಿ ಕಲಿಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರಿ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್,ಶ್ರೀಮತಿ ಗಂಗಾ ಡಾ. ವಿಶ್ವನಾಥ ತೋಟಿ, ಬಸವರಾಜ ಬಲಕುಂದಿ, ಶಾಲಾ ಮಂತ್ರಿ ಮಂಡಲ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
Kalyanasiri Kannada News Live 24×7 | News Karnataka
