Free cancer check up to Rs. 5 lakh free treatment in private hospitals: Dr. Ishwara Savadi

ಗಂಗಾವತಿ: ಐಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಯಶಸ್ವಿನಿ ಕಾರ್ಡ್, ಇಎಸ್‌ಐ ಹಾಗು ಸರಕಾರಿ ನೌಕರರಿಗೆ ಸರಕಾರದಿಮದ ಸುಮಾರು ರು.೫ ಲಕ್ಷದ ವರೆಗ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನಡೆಸಲಾಗುತ್ತಿದ್ದು ಸಾರ್ವಜನಿಕರು ಕ್ಯಾನ್ಸರ್ ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ ಎಂದು ಸರಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವಡಿ ಹೇಳಿದರು.
ಅವರು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಜಿಲ್ಲಾ ಸರ್ವೇಕ್ಷಣ ಘಟಕ ಕೊಪ್ಪಳ ಮತ್ತು ಸರಕಾರಿ ಉಪ ವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಸೂಪರ್ ಸ್ಪೇಷಾಲಿಟಿ ಅಸ್ಪತ್ರೆ ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕಪುಟ್ಟ ರೋಗಗಳಿಗೆ ಗಂಗಾವತಿಯ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು ಹೆಚ್ಚಿನ ವ್ಯಾದಿ ಕಂಡು ಬಂದಲ್ಲಿ ಹುಬ್ಬಳ್ಳಿಯ ಅತ್ಯಾಧುನಿಕ ಸೌಲಭ್ಯವುಳ್ಳ ಹುಬ್ಬಳ್ಳಿಯ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಗೆನ ಕಳುಹಿಸಿಕೊಡಲಾಗುವುದು ಐದು ಲಕ್ಷದವರೆಗೂ ವಿವಿಧ ಕಾರ್ಡು ಹೊಂದಿದವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನಾ ಪಡೆಯಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಾ.ಸ್ನೇಹಲ ರೆಡ್ಡಿ ಹಾಗು ಡಾ.ಅದಿತ್ಯ ನಂದನ್ ಇದ್ದರು. ಇತರೆ ಸಹಾಯಕರು ಸೇರಿ ೫೨ ಜನರಿಗೆ ತಪಾಸಣೆ ನಡೆಸಿದರು.