Veerashaiva Lingayat Panchmasali Samaj Pratibha Puraskar Program.
ಗಂಗಾವತಿ: ತಾಲೂಕಿನ ಹಿರೇಜಂತಕಲ್‌ನ ಮುಡ್ಡಾಣೇಶ್ವರ ದೇವಸ್ಥಾನದಲ್ಲಿ ದಿನಾಂಕ ೦೫-೧೧-೨೦೨೩ ರಂದು ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳು ಪಂಚಮಸಾಲಿ ಪೀಠ ಕೂಡಲಸಂಗಮ ಇವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗಂಗಾವತಿ ತಾಲೂಕ ಘಟಕ ಹಾಗೂ ಹಿರೇಜಂತಕಲ್ ಗ್ರಾಮ ಘಟಕದ ಸಹಕಾರದೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮಾಳ ೨೪೫ನೇ ಜಯಂತಿ ಹಾಗೂ ಪಂಚಮಸಾಲಿ ಸಮಾಜದ ಪ್ರತಿಭಾವಂತ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ ತಿಪ್ಪಶೆಟ್ಟಿ ವಕೀಲರು ಪ್ರಕಟಣೆಯಲ್ಲಿ ತಿಳಿಸಿದರು.
ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅಕ್ಟೋಬರ್-೩೦ ಕೊನೆಯ ದಿನವನ್ನಾಗಿ ಈ ಹಿಂದೆ ನಿಗದಿಪಡಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ಸಲ್ಲಿಸದ ಕಾರಣ ಕೊನೆಯ ದಿನಾಂಕವನ್ನು ನವೆಂಬರ್-೦೨ ಕ್ಕೆ ವಿಸ್ತರಿಸಲಾಗಿದೆ. ಕಾರಣ ಎಸ್.ಎಸ್.ಎಲ್.ಸಿ. ಯಲ್ಲಿ ಶೇ ೯೫, ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ ೯೦ ರಷ್ಟು ಅಂಕಗಳನ್ನು ಪಡೆದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು, ಅಂಕಪಟ್ಟಿ ಜರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ೨ ಪಾಸ್‌ಪೋರ್ಟ್ ಸೈಜ್ ಭಾವಚಿತ್ರಗಳ ಜೊತೆಗೆ ಈ ಕೆಳಗಿನವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಶಿವಪ್ಪ ಯಲಬುರ್ಗಿ, ಅಧ್ಯಕ್ಷರು ೯೮೮೦೮೭೯೨೬೮.
ಬಸವರಾಜ್ ಪಾಟೀಲ್, ಉಪಾಧ್ಯಕ್ಷರು ೯೧೦೮೫೮೪೯೭೭
ಸುಭಾಷ್ ಚಂದ್ರ ತಿಪ್ಪಶೆಟ್ಟಿ ವಕೀಲರು, ಪ್ರಧಾನ ಕಾರ್ಯದರ್ಶಿ ೯೯೦೨೪೪೭೧೧೫.
ಮಂಜುನಾಥ್ ಹೊಸಕೇರಿ, ಸಂಘಟನಾ ಕಾರ್ಯದರ್ಶಿ ೯೮೮೦೮೯೦೭೫೪
ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.