Siddappa of Bhadraiyanahalli village, who grew Sevanti flower and lost business.

ವರದಿ :ಬಂಗಾರಪ್ಪ ಸಿ ಹನೂರು .
ಹನೂರು : ತಾಲ್ಲೂಕಿನ ಭದ್ರಯನಹಳ್ಳಿ ಗ್ರಾಮದ ಮುನಿಶೆಟ್ಟಿಯವರ ಹಿರಿಯ ಮಗ ಸಿದ್ದಪ್ಪ ಎಂಬುವವರ ಜಮೀನಿನಲ್ಲಿ ಸುಮಾರು 2ಎಕರೆ ಸೇವಂತಿಗೆ ಹೂವು ಬೆಳೆದಿದ್ದಾರೆ .ಉತ್ತಮ ಬೆಳೆಗೆ ಉತ್ತಮ ಬೆಲೆ ಸಿಗದೆ ರೈತ ಸಿದ್ದಪ್ಪ ಕಂಗಾಲಾಗಿದ್ದಾರೆ. ಜೊತೆಗೆ ದಸರ ಹಬ್ಬದ ದಿನ ಸ್ವಲ್ಪ ಬೆಲೆ ಇತ್ತು ಆದರೂ ಸಹ ಹೂವು ಕೊಯ್ಯಲು ಕೂಲಿ ಆಳುಗಳು ಸಿಗದೇ ಸಾಕಷ್ಟು ಹೂವು ತೋಟದಲ್ಲಿಯೇ ಉಳಿದಿದೆ. ಇದರಿಂದ ನಾವು ಹಾಕಿದ ಬಂಡವಾಳ ಕೂಡ ಬಂದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ, ಸ್ಥಳೀಯವಾಗಿ ಹೂವಿನ ಮಾರುಕಟ್ಟೆ ಇಲ್ಲವಾದ ಕಾರಣ ಸೇಲಂ ಅಥವಾ ಬೆಂಗಳೂರಿಗೆ ಹೂವನ್ನು ಸಾಗಿಸಲು ಸಾರಿಗೆ ವೆಚ್ಚ ತುಂಬಾ ತಗಲುತ್ತದೆ ಜೊತೆಗೆ ಗೊಬ್ಬರದ ಅಂಗಡಿಯವರಿಗೆ ಮತ್ತು ಕೂಲಿ ಆಳುಗಳಿಗೆ ಹಣ ನೀಡಲು ನಮ್ಮ ಬಳಿ ಯಾವುದೆ ಹಣ ಇಲ್ಲ ಎಂದು ರೈತ ದಂಪತಿಗಳು ಕಣ್ಣೀರು ಹಾಕುತ್ತಿದ್ದಾರೆ. ಇದುವರೆವಿಗೂ ಅಂದಾಜು 2ಲಕ್ಷ ವೆಚ್ಚವಾಗಿದೆ ಎಂದು ತಿಳಿಸಿದರು, ಈ ಬಾರಿಗೆ ಹೂವಿನ ಜೊತೆಗೆ ನಮ್ಮ ಬದುಕು ಕೂಡ ಅರಳಬಹುದು ಎಂದು ಕಾದು ಕುಳಿತ ರೈತ ದಂಪತಿಗಳಿಗೆ ಹೂವಿನ ಬೆಳೆಯಿಂದ ನಿರಾಸೆಯಾಗಿದೆ. ಇದೆನೇ ಇರಲಿ ಈ ರಸ್ತೆಯಲ್ಲಿ ಹೋಗುವ ದಾರಿಹೋಕರನ್ನ ಮಾತ್ರ ಈ ಹೂವಿನ ತೋಟ ಮಾತ್ರ ತನ್ನತ್ತ ಕೈ ಬೀಸಿಕರೆದು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವಂತೆ ತನ್ನ ಸೌಂದರ್ಯದಿದ ಮೋಡಿ ಮಾಡುತ್ತಾ ಅರಳಿನಿಂತಿರೋದಂತು ಸತ್ಯ. ಇಷ್ಟೋಂದು ಅದ್ಭುತವಾಗಿ ಹೂವಿನ ಕೃಷಿ ಮಾಡಿದ ರೈತ ದಂಪತಿಗಳಿಗೆ ಅಭಿನಂದಿಸೋಣ ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆಗೆ ಮಾರಾಟವಾಗಿ ಅವರು ಬದುಕು ಹಸನಾಗಲಿ ಎಂದು ಹಾರೈಸೋಣ ಬಂಧುಗಳೇ. ಎಂದು ಸ್ಥಳೀಯ ನಿವಾಸಿ -ಗೋವಿಂದರಾಜು ಎಂ (ಕಲ್ಕಿ) ಎಂಬುವವರು ತಿಳಿಸಿದರು .