A.29 Veerashaiva Mahasabha Pratibha Puraskara, Membership Campaign

ಗಂಗಾವತಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಹಾಗು ಜಿಲ್ಲಾ ಘಟಕ ಕೊಪ್ಪಳ ಸಹಯೋಗದಲ್ಲಿ ೨೦೨೧-೨೦೨೨ ಮತ್ತು ೨೦೨೨-೨೦೨೩ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗು ಪಿಯುಸಿ ದ್ವೀತೀಯ ವರ್ಷದಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಅಕ್ಟೋಬರ್ ೨೯ ರವಿವಾರ ಬೆಳಗ್ಗೆ ೧೦ ಗಂಟೆಗೆ ನಗರದ ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಧ್ಯಕ್ಷರು, ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಯಕ್ರಮದಲ್ಲಿ ಕೊಪ್ಪಳ ಗವಿ ಮಠದ ಅಭಿನವ ಗವಿಶ್ರೀಗಳು ಕೊಪ್ಪಳ, ಶ್ರೀ ನಾಗಭೂಷಣ ಶಿವಾಚಾರ್ಯರು ಹೆಬ್ಬಾಳ, ಶ್ರೀ ಭುವನೇಶ್ವರ ಶ್ರಿಗಳು ಸುಳೇಕಲ್ ಹಾಗು ಶ್ರೀ ಗವಿಶಿದ್ದೇಶ್ವರ ಶ್ರಿಗಳು ಅರಳಹಳ್ಳಿ ಇವರು ದಿವ್ಯ ಸಾನಿಧ್ಯವಹಿಸುವರು, ಕಾರ್ಯಕ್ರಮದ ವೀರಶೈವ ಮಹಾಸಭಾದ ಕೊಪ್ಪಳ ಜಿಲ್ಲಾಧ್ಯಕ್ಷ ಶರಣಪ್ಪ ಬಸಪ್ಪ ಹ್ಯಾಟಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರು ಹಾಗು ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಪರಣ್ಣ ಮುನವಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ,ಮುಕ್ತಾಂಭಾ, ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ, ಮಹಾಸಭಾದ ಕೈಗಾರಿಕೆ ವಾಣಿಜ್ಯ ಘಟಕದ ಕಾರ್ಯದರ್ಶಿ ವಿಜಯಪಾಟೀಲ ಇವರು ಪಾಲ್ಗೊಳ್ಳಲಿದ್ದಾರೆ, ವಿಶೇಷ ಆಹ್ವಾನಿತರಾಗಿ ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಶಿವರಾಮಗೌಡ, ಶಾಸಕರಾದ ಬಸವರಾಜ್ ರಾಯರೆಡ್ಡಿ, ಮಾಜಿ ಶಾಸಕರಾದ ಜಿ,ವೀರಪ್ಪ, ಹಾಲಪ್ಪ ಆಚಾರ್ಯ, ಕೆ.ಶರಣಪ್ಪ ಇತರರು ಭಾಗವಹಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾಧ್ಯಕ್ಷ ಶರಣಪ್ಪ ಬ ಹ್ಯಾಟಿ ಜೆಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.