Dharmadhikari Narayana Rao was felicitated by various Bhajan Board members
ಗಂಗಾವತಿ 23,, ಸಮಾಜ ಬಾಂಧವರ ಸಂಘಟನೆಯನ್ನು ಬೆಳೆಸಿ ಧರ್ಮ ಜಾಗೃತಿಗೆ ಮುಂದಾಗಿರುವ ಶಂಕರ ಮಠದ ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ ಅವರನ್ನು ನಗರದ ವಿವಿಧ ಭಜನಾ ಮಂಡಳಿಗಳ ಸದಸ್ಯರು ಶನಿವಾರದಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ದರು, ಶಾರದಾ ಶರನ್ನ ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ ಬಳಿಕ ಸೌಂದರ್ಯ ಲಹರಿ ಭಗಿನಿಯರ ಸಂಘ, ಶ್ರೀ ಸತ್ಯ ದೇವ ಭಜನಾ ಮಂಡಳಿ ಶ್ರೀ ಗಂಗಾದೇಶ್ವರ ಭಜರ ಮಂಡಳಿ ಶ್ರೀ ಲಲಿತಾ ಸಹಸ್ರನಾಮ ತಂಡ, ವಿಜಯ ಧ್ವಜ ಬಜನಾ ಮಂಡಳಿ ಶ್ರೀ ಶಾರದಾ ಶಂಕರ, ಭಜನಾ ಮಂಡಳಿ, ಸದಸ್ಯರುಗಳಾದ ರೇಖಾಗಣಿ ಅನಿತಾ ಸವಿತಾ ರೇಖಾ ಹಿರೇಮಠ ಗಾಯಿತ್ರಿ ಕವಿತಾ ಚೌದ್ರಿ ಇತರರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು, ಬಳಿಕ ಮಾತನಾಡಿದ ರೇಖಾ ಅಂಗಡಿಯವರು, ಕಳೆದ 5 ವರ್ಷಗಳಿಂದ ಶಂಕರ ಮಠದ ಹಬ್ಬದ ಶುಭಾಶಯಗಳು ಸರ್ವ ಜನಾಂಗದವರನ್ನು ಒಗ್ಗಡಿಸುವುದರ ಮೂಲಕ ಲಲಿತ ಸಹಸ್ರ ಪಾರಾಯಣ ಸೌಂದರ್ಯದ ಲಹರಿ ಕುಂಕುಮಾರ್ಚನೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ತೊಡಗಿಸಿಕೊಳ್ಳುವುದರ ಮೂಲಕ ಸಂಘಟನೆ ಹಾಗೂ ಸಂಸ್ಕಾರವನ್ನು ನೀಡುವ ಅವರ ಕಾರ್ಯವಾಗಿದೆ ಎಂದು ತಿಳಿಸಿದರು, ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ ಮಾತನಾಡಿ, l ಸತತ ಒಂಬತ್ತು ದಿನಗಳ ಕಾಲ ಮಹಿಳೆಯರು ಶ್ರೀ ಮಠಕ್ಕೆ ಆಗಮಿಸಿ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಶ್ರೀ ಶಾರದಾಂಬೆ ಪಾತ್ರರಾಗಿದ್ದು ಸಂತಸದಾಯಕವಾಗಿದೆ, ದೀಪಾವಳಿಯ ನಂತರ ಮೇಲಿನ ಎಲ್ಲಾ ಭಜರ ಮಂಡಳಿಯ ಸದಸ್ಯರು ಸೇರಿದಂತೆ ಆಸಕ್ತರನ್ನು ಶೃಂಗೇರಿಗೆ ಪ್ರವಾಸದ ಮೂಲಕಶಾರದಾಂಬೆಯ ದರ್ಶನ ಹಾಗೂ ಗುರುಗಳ ಅನುಗ್ರಹಕ್ಕೆ ತಾವು ಸಂಕಲ್ಪ ಮಾಡಿದ್ದು, ಹೆಸರುಗಳನ್ನು ತಮ್ಮ ಮುಖಂಡರಲ್ಲಿ ನೊಂದಾಯಿಸುವಂತೆ ಮನವಿ ಮಾಡಿದರು,