Breaking News

ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜಗದೀಶ್ ಗುಡಗುಂಟಿ

MLA Jagdish Gudgunti who drove the ambulance vehicle

ಜಾಹೀರಾತು

ಸಾವಳಗಿ: ಒಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಉತ್ತಮ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗುವ ಅನಿವಾರ್ಯತೆ ಎದುರಾದಾಗ ಆಂಬುಲೆನ್ಸ್ ಅಗತ್ಯವಾಗಿದೆ ಆಂಬುಲೆನ್ಸ್ ಜೀವ ರಕ್ಷಕ ಸಾಧನವಾಗಿದೆ ಎಂದು ಜಮಖಂಡಿ ಶಾಸಕ ನಾಡೋಜ ಜಗದೀಶ್ ಗುಡಗುಂಟಿ ಅವರ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಿನಿ ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಪಘಾತ ಹಾಗೂ ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ 108 ಕ್ಕೆ ಕರೆ ಮಾಡಿದರೆ ತಕ್ಷಣ ನಿವು ಇರುವ ಸ್ಥಳಕ್ಕೆ ಬರುತ್ತದೆ, ಆಂಬುಲೆನ್ಸ್ ಸೇವೆಯಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾದಿಕಾರಿಳಾದ ಡಾ|| ಪ್ರಕಾಶ ಹುಗ್ಗಿ, ಎಸ್.ಎಸ್.ಬಿರಾದಾರ, ಗ್ರಾಮ ಪಂಚಾಯತಿ ಅಧ್ಯಕ್ಷ ಜಿನ್ನುಮತಿ ಉಪಾಧ್ಯ, ಗ್ರಾಂ ಪಂ ಸದಸ್ಯರಾದ ರಾಜುಗೌಡ ಪಾಟೀಲ, ಬಸವರಾಜ ಪರಮಗೌಡ, ವಿನೋಬಾ ನ್ಯಾಮಗೌಡ, ಸುಜೀತಗೌಡ ಪಾಟೀಲ ಗಾಮೇಶ ಬಾಪಕರ, ಗಜಾನನ ಮಾಳಿ, ಭರತೇಶ ಜಮಖಂಡಿ, ಬಸುಗೌಡ ಹೊನವಾಡ, ಅಪ್ಪುಗೌಡ ಪಾಟೀಲ, ಉಮೇಶ್ ಜಾಧವ, ಸುರೇಶ್ ಯಕ್ಸೆಂಬೆ, ರಾಜಶೇಖರ ಹಿರೇಮಠ, ಸುರೇಶಗೌಡ ಬಿರಾದಾರ, ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.