ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಪಂಪಣ್ಣ ನಾಯಕ ರವರು ಗಂಗಾವತಿ ನಗರದಲ್ಲಿ ಸುಮಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯವು ಕುಂಟಿತಗೊಂಡಿದ್ದು ನಗರದಲ್ಲಿ ಕೆಲವೊಂದು ಕಾಮಗಾರಿಗಳು ಅಭಿವೃದ್ಧಿಗೊಂಡಿರುವುದಿಲ್ಲ.
ಗಂಗಾವತಿ ನಗರದಲ್ಲಿ ಸಿ.ಟಿ.ಮಾರ್ಕೆಟ ನಿರ್ಮಾಣವಾಗಿ ೧೫ ವರ್ಷಗಳು ಕಳೇದರೂ ವರ್ಗಾವಣೆಯಾಗಿರುವುದಿಲ್ಲ. ಸದರಿ ಮಾರ್ಕೆಟನ್ನು ಕೂಡಲೇ ವರ್ಗಾವಣೆಗೊಳಿಸಿ ಸದರಿ ಸ್ಥಳದಲ್ಲಿ ವ್ಯಾಪಾರ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಬೇಕು.
ಗಂಗಾವತಿ ನಗರದಲ್ಲಿ ರಸ್ತೆಗಳು ಹಾಳಾಗಿದ್ದು ಇದರಲ್ಲಿ ಮುಖ್ಯರಸ್ತೆಗಳು ಹಾಗೂ ನಗರದ ೩೫ ವಾರ್ಡಗಳಲ್ಲಿ ರಸ್ತೆಗಳು ಹಾಳಾಗಿದ್ದು ಸದರಿ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು.
ಗಂಗಾವತಿ ನಗರದ ಎಲ್ಲಾ ವೃತ್ತಗಳಲ್ಲಿ ಸಾರ್ವಜನಿಕವಾಗಿ ವಿಶೇಷವಾಗಿ ಮಹಿಳೆಯರಿಗೆ ಶೌಚಾಲಯಗಳು ಇರುವುದಿಲ್ಲ. ಇದರಿಂದ ಬೇರೆ ಬೇರೆ ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಬರುವಂತಹ ಪ್ರಯಾಣಿಕರಿಗೆ ಸರಿಯಾದ ರೀತಿಯಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು.
ಅಮೃತ ಸಿ.ಟಿ.ಯೋಜನೆಯಡಿಯಲ್ಲಿ ನಿರ್ಮಾಣಗೋಂಡಿರುವ ಪುಟ್ಪಾತ್ಗಳು ಅವೈಜ್ಙಾನಿಕವಾಗಿ ನಿರ್ಮಾಣಮಾಡಿದ್ದು ಮತ್ತು ಇವುಗಳನ್ನು ಕೆಲವೊಂದು ವ್ಯಾಪಾರಸ್ಥರು ತಮ್ಮ ಸ್ವಂತ ಉಪಯೋಗಕ್ಕಾಗಿ ಸದರಿ ಪುಟ್ಪಾತ್ನ ಮೇಲೆ ಅಂಗಡಿಗಳನ್ನು ಹಾಕಿಕೊಂಡು ಸಾರ್ವಜನಿಕರಿಗೆ ತಿರುಗಾಡುವುದಕ್ಕೆ ತೊಂದರೆಯುಂಟು ಮಾಡಿರುತ್ತಾರೆ. ಇವುಗಳನ್ನು ಅತೀ ಜರೂರಾಗಿ ತೆರವುಗೊಳಿಸಿ ಸಾರ್ವಜನಿಕರು ಪುಟ್ಬಾತ್ ಮೇಲೆ ತಿರುಗಾಡುವಂತೆ ನಿರ್ಮಾಣ ಮಾಡಬೇಕು.
ಗಂಗಾವತಿ ತಾಲೂಕಿನಲ್ಲಿ ಕೆಲವೊಂದು ಸರ್ಕಾರಿ ಕಚೇರಿಗಳು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತಿ ಕುಡಿಯು ನೀರು ಇಲಾಖೆ, ಪರಿಶಿಷ್ಟ ಪಂಗಡಗಳ ತಾಲೂಕು ಕಛೇರಿಗಳು, ವಾಣಿಜ್ಯ ತೆರಿಗೆ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಹಾಗೂ ಇನ್ನಿತರ ತಾಲೂಕು ಕಛೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ಹಣವು ಪೋಲಾಗುತ್ತಿದ್ದು ಇವುಗಳಿಗೆ ಸರ್ಕಾರದ ಕಛೇರಿಗಳು ಖಾಲಿ ಇದ್ದರೂ ಸಹ ಅವುಗಳಲ್ಲಿ ಉಪಯೋಗಿಸದೇ ಬಾಡಿಗೆ ಕಟ್ಟದಲ್ಲಿ ಇರುವುದನ್ನು ಅತೀ ಜರೂರಾಗಿ ಸರ್ಕಾರಿ ಕಟ್ಟಡಗಳಲ್ಲಿ ವರ್ಗಾವಣೆಗೊಳಿಸಿ ಕಾರ್ಯನಿರ್ವಹಿಸುವಂತೆ ಆದೇಶಿಸಬೇಕು.
ಕೇಂದ್ರ ಬಸ್ ನಿಲ್ದಾಣ ಗಂಗಾವತಿಯು ಸಂಪೂರ್ಣವಾಗಿ ಅಸ್ವಸ್ಥವಾಗಿದ್ದು, ಸದರಿ ಬಸ್ನಿಲ್ದಾಣದಲ್ಲಿ ಶೌಚಾಲಯಗಳು, ಕುಡಿಯುವ ನೀರು, ಹಾಗೂ ಸ್ವಚ್ಛತೆ ಇಲ್ಲದೇ ತಿಪ್ಪಿಗುಂಡಿಯಂತೆ ಕಾಣುತ್ತಿದೆ. ಸದರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸರಿಯಾದ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ಸ್ವಚ್ಛತೆಗೊಳಿಸುವುದು ಹಾಗೂ ಬಸ್ನಿಲ್ದಾಣವನ್ನು ಸ್ವಚ್ಛವಾಗಿ ಇಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಬೇಕು.
ಗಂಗಾವತಿ ನಗರದಲ್ಲಿ ಆಟೋ ಚಾಲಕರಿಗೆ ಸರಿಯಾದ ರೀತಿಯಲ್ಲಿ ಆಟೋ ನಿಲ್ದಾಣಗಳು ಪ್ರತಿಯೊಂದು ಸರ್ಕಲ್ಗಳಲ್ಲಿ ಇಲ್ಲದಿರುವುದರಿಂದ ಅವರಿಗೆ ಸ್ಥಳ ನಿಯೋಜನೆ ಮಾಡಿ ಅವರು ಆಟೋ ನಿಲ್ಲಿಸುವ ಸ್ಥಳದಲ್ಲಿ ವ್ಯವಸ್ಥಿತವಾಗಿ ಆಟೋ ನಿಲ್ದಾಣಗಳನ್ನು ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಆದೇಶಿಸಬೇಕು & ಎಲ್ಲಾ ವಿಷಯಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅತೀ ಶಿಘ್ರವಾಗಿ ಆಗಬೇಕು ಮತ್ತು ತಾಲೂಕು ಕಛೇರಿಗಳನ್ನು ಸ್ವಂತಕಟ್ಟದಲ್ಲಿ ಕಾರ್ಯನಿರ್ವಹಿಸುಂತೆ ಆದೇಶಿಸಬೇಕೆಂದು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷರು ಪಂಪಣ್ಣ ನಾಯಕ ಇವರು ಮನವಿ ಸಲ್ಲಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ
ಜಾಹೀರಾತು