Hanumanthappa Andagi entertains everyone by reciting a poem at Dussehra poetry festival.

ಕೊಪ್ಪಳ : ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ಜನದನಿ ಪ್ರಕಾಶನದ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ದಸರಾ ಕಾವ್ಯ ಸಂಭ್ರಮ ೨೦೨೩ರಲ್ಲಿ ಕೊಪ್ಪಳ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಚುಟುಕು ವಾಚಿಸಿ ಎಲ್ಲರ ಗಮನ ಸೆಳೆದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಟಿ. ಎಂ.ಭಾಸ್ಕರ್, ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊಫೆಸರ್ ಕೆ. ವಿ.ಪ್ರಸಾದ, ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಮತ್ತು ನಿರ್ದೇಶಕರಾದ ಪ್ರೊಫೆಸರ್ ಮನೋಜ ಡೊಳ್ಳಿ, ಜನದನಿ ಪ್ರಕಾಶನದ ಪ್ರಕಾಶಕಿ ಸಾವಿತ್ರಿ ಮುಜುಮದಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.