Hanumanthappa Andagi was selected for the State-level Sadhak Shiromani Award
`
ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರನ್ನು ರಾಜ್ಯಮಟ್ಟದ ಸಾಧಕ ಶಿರೋಮಣಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಿಮಿಷಾಂಬ ಪ್ರಕಾಶನದ ಮುಖ್ಯಸ್ಥರು ಹಾಗೂ ಸಿರಿಗನ್ನಡ ಪ್ರತಿಷ್ಠಾನದ ರಾಜ್ಯ ಗೌರವಾಧ್ಯಕ್ಷರಾದ ಶ್ರೀನಿವಾಸ ಚಿತ್ರಗಾರ ತಿಳಿಸಿದ್ದಾರೆ. ಹನುಮಂತಪ್ಪ ಅಂಡಗಿ ಅವರ ಸಾಹಿತ್ಯ ಸೇವೆ, ಶೈಕ್ಷಣಿಕ ಸೇವೆ ಹಾಗೂ ಸಂಘಟನೆ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಿಮಿಷಾಂಬ ಪ್ರಕಾಶನ ಮತ್ತು ಆರ್ಟ್ ಗ್ಯಾಲರಿ ಕೊಪ್ಪಳ, ವಿಶಾಲ ಪ್ರಕಾಶನ ಮಾದಿನೂರು, ಸುಮಸಿರಿ ಕನ್ನಡ ಪ್ರಕಾಶನ ಕೊಪ್ಪಳ, ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಭಾಗ್ಯನಗರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀನಿವಾಸ ಚಿತ್ರಗಾರ ಶಿಕ್ಷಕರು ಹಾಗೂ ಸಾಹಿತಿಗಳು ಇವರ ಶ್ರೀ ನಿಮಿಷಾಂಬ ಪ್ರಕಾಶನದ ೨೦ನೇ ವಾರ್ಷಿಕೋತ್ಸವದ ಅಂಗವಾಗಿ ಅಕ್ಟೋಬರ ೧೦ ರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ತಾಲೂಕಿನ ಭಾಗ್ಯನಗರದ ನಿಮಿಷಾಂಬದೇವಿ ದೇವಸ್ಥಾನದಲ್ಲಿ
ರಾಜ್ಯಮಟ್ಟದ ಸಾಧಕ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ಭಾಗ್ಯನಗರದ ಜಗದ್ಗುರು ಶ್ರೀ ಶಂಕರಾಚಾರ್ಯ ಮಠದ ಶ್ರೀ ಸ್ವಾಮಿ ಶಿವರಾಮಕೃಷ್ಣಾನಂದ ಭಾರತಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕöÈತರಾದ ಜಿ.ಎಸ್. ಗೋನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶಬಾಬು ಸುರ್ವೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.