ಕೊಪ್ಪಳ ಅಕ್ಟೋಬರ್ 03 (ಕರ್ನಾಟಕ ವಾರ್ತೆ): ಕುಕನೂರು ತಾಲೂಕಿನ ತಳಕಲ್ ಬಸ್ ನಿಲ್ದಾಣದಲ್ಲಿದ್ದ ಅಂದಾಜು 28 ವಯೋಮಾನದ ಮಾನಸಿಕ ಅಸ್ವಸ್ತ ಮಹಿಳೆಯನ್ನು ಸೆ.27ರಂದು ಸಂಜೆ ವೇಳೆಗೆ 112 ತುರ್ತು ಪೊಲೀಸ್ ವಾಹನದಲ್ಲಿ ಸಂರಕ್ಷಿಸಿ ಸಖಿ ಒನ್ ಸ್ಟಾಪ್ ಸೆಂಟರನಲ್ಲಿ ದಾಖಲಿಸಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ.
ಈ ಮಹಿಳೆಯ ಭಾವಚಿತ್ರವನ್ನು ತಳಕಲ್ ಗ್ರಾಮದ ಜನರಿಗೆ ತೋರಿಸಿ ಮಾಹಿತಿ ಸಂಗ್ರಹಿಸಲಾಗಿ ಅವಳಿಗೆ ಯಾವುದೇ ರಕ್ತ ಸಂಬಂಧಿಯಾಗಲಿ, ದೂರದ ಸಂಬಂಧಿಯಾಗಲಿ ಕಂಡು ಬಂದಿರುವುದಿಲ್ಲ. ತಳಕಲ್ ಗ್ರಾಮದಲ್ಲಿ ಯಾರು ಉಪಯುಕ್ತ ಮಾಹಿತಿ ನೀಡಿರುವುದಿಲ್ಲ ಎಂಬ ಮಾಹಿತಿಯನ್ನು ಕುಕನೂರ ಪೊಲೀಸ್ ಠಾಣಾಧಿಕಾರಿಗಳು ನೀಡಿರುತ್ತಾರೆ.
ತಾನು ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲೂಕಿನ ಕೆರೂರು ಗ್ರಾಮದವಳು. ತನ್ನ ಹೆಸರು ಮಂಜುಳಾ. ತನ್ನ ತಾಯಿ ಹೆಸರು ಲಿಂಗಮ್ಮ, ತನ್ನ ತಂದೆ ಹೆಸರು ಮರಿಯಪ್ಪ ಎಂಬುದಾಗಿ ಈ ಮಹಿಳೆ ತಿಳಿಸಿರುತ್ತಾಳೆ. ಆದ್ದರಿಂದ ಈ ಮಹಿಳೆಯ ಕುಟುಂಬಸ್ಥರನ್ನು ಪತ್ತೆ ಮಾಡಲು ಈ ಮಾಹಿತಿಯನ್ನು ಪ್ರಕಟಿಸಲಾಗಿದೆ. ಈ ಮಹಿಳೆಯ ಕುಟುಂಬದವರು ಪತ್ತೆಯಾದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಫ್ ಸೆಂಟರ್‌ನ ಘಟಕ ಆಡಳಿತಾಧಿಕಾರಿಗಳ ಮೊ.ಸಂ: 8217646873 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಸಖಿ ಒನ್ ಸ್ಟಾಪ್ ಸೆಂಟರನ ಘಟಕ ಆಡಳಿತಾಧಿಕಾರಿಗಳು ಕೋರಿದ್ದಾರೆ.
ಮಾನಸಿಕ ಅಸ್ವಸ್ಥ ಮಹಿಳೆಯಕುಟುಂಬಸ್ಥರ ಪತ್ತೆಗೆ ಮನವಿ
ಜಾಹೀರಾತು