Free rabies vaccination program for pet dogs from September 28
ಕೊಪ್ಪಳ ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ): 2023ನೇ ಸಾಲಿನ “ವಿಶ್ವ ರೇಬಿಸ್ ದಿನಾಚರಣೆ” ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕೊಪ್ಪಳ ಪಾಲಿಕ್ಲಿನಿಕ್ ವತಿಯಿಂದ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 27ರ ಒಂದು ತಿಂಗಳವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಲಸಿಕೆಯು ಸಾಕಿದ ನಾಯಿಗಳಿಗೆ ಮಾತ್ರವಾಗಿದ್ದು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕೊಪ್ಪಳ ಪಾಲಿಕ್ಲಿನಿಕ್‌ನಲ್ಲಿ ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆಯನ್ನು ಹಾಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08539-299906ಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಪಾಲಿಕ್ಲಿನಿಕ್ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.