Celebrating the 51st Jatra Mahotsav for Sri Tayamma Devi
ಗಂಗಾವತಿ, ನಗರದ ಮುರ ಹರಿ ಕ್ಯಾಂಪಿನಲ್ಲಿ ಮಂಗಳವಾರದ ಶ್ರೀ ತಾಯಮ್ಮ ದೇವಿಯ 51ನೇ ಜಾತ್ರಾ ಮಹೋತ್ಸವ, ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿ ಇಂದ ಜರು ಗಿತು, ಬೆಳಿಗ್ಗೆ ಕಲ್ಗೆ ಪೂಜೆ ಪೂರ್ಣ ಕುಂಭ ಕಳಸದ ಮೆರವಣಿಗೆ ಬಳಿಕ ಶ್ರೀ ತಾಯಮ್ಮ ದೇವಿ ಮೂರ್ತಿಗೆ ಅಭಿಷೇಕ ಕುಂಕುಮಾರ್ಚನೆ ಲಲಿತ ಸಹಸ್ರನಾಮ ಪಾರಾಯಣ, ಸೇರಿದಂತೆ ಮಹಿಳೆಯರಿಗೆ ಉಡಿ ತುಂಬುವಿಕೆ, ಭಕ್ತರಿಂದ ದೀ ಡ್ ನಮಸ್ಕಾರ, ಇತ್ಯಾದಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಬಳಿಕ ಪಾಲ್ಕಿ ಉತ್ಸವ ಆರತಿ ಮಹಾಮಂಗಳಾರತಿ ತೀರ್ಥ ಪ್ರಸಾದ ಜರುಗಿತು ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ದುರ್ಗಪ್ಪ, ಪ್ರಧಾನ ಕಾರ್ಯದರ್ಶಿ ಪಂಪನ ನಾಯಕ್ ಜಾತ್ರಾ ಮಹೋತ್ಸವದ ಕುರಿತು ಮಾತನಾಡೀ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ದೇವಸ್ಥಾನಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದು ದೇವಸ್ಥಾನದ ಜೀರ್ಣೋದಕ್ಕಾಗಿ ಹದಿನೈದು ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ ಹಾಗೆ ಶಾಸಕ ಪರಣ್ಣ ಮುನವಳ್ಳಿ ಎಚ್ ಆರ್ ಶ್ರೀನಾಥ್ ಮಾಜಿ ಸಂಸದ ವಿರೂಪಾಕ್ಷಪ್ಪ ಸಂಸದ ಕರಡಿ ಸಂಗಣ್ಣ ಇತರರು ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು ದೇವಸ್ಥಾನದ ಅಧ್ಯಕ್ಷ ದುರ್ಗಪ್ಪ ಮಾತನಾಡಿ ಯಾವುದೇ ಜಾತಿ ಮತ ಧರ್ಮ ಎನಿಸದೆ ಸರ್ವಧರ್ಮೀಯರ ಸಹಕಾರದಿಂದ ದೇವಸ್ಥಾನ ಇವತ್ತು ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ, ಅತ್ಯಂತ ಶಕ್ತಿಯುತ ಶ್ರೀ ತಾಯಮ್ಮ ದೇವಿ ಸರ್ವರನ್ನು ಅನುಗ್ರಹಿಸುತ್ತಾ ಬಂದಿರುವುದು ಕಾಣಬಹುದಾಗಿದೆ, ಸಾಕಷ್ಟು ಭಕ್ತಾದಿಗಳು ತಮ್ಮ ತಮ್ಮ ಹರಕೆಗಳನ್ನು ತೀರಿಸಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳು ಮುಖಂಡರು ಆಗಮಿಸಿ ಶ್ರೀ ತಾಯಮ್ಮ ದರ್ಶನ ಪಡೆದುಕೊಂಡರು,