Breaking News

ಸರಕಾರಿ ಉಪಕರಣಗಾರಮತ್ತು ತರಭೇತಿ ಕೇಂದ್ರ ( GTTC) ೨೨ ವಿದ್ಯಾರ್ಥಿಗಳು(ಶೇ.೫೦ ರಷ್ಟು) ಅನುತ್ತೀರ್ಣರಾಗಿರುವದಕ್ಕೆ ಆಡಳಿತ ಮಂಡಳಿಯ ವೈಪಲ್ಯ ಕಾರಣ


ಕೊಪ್ಪಳ: ನಗರದ ಗದಗ ರಸ್ತೆ ದದೇಗಲ್ ಹತ್ತಿರವಿರುವ ಸರಕಾರಿ ಉಪಕರಣಗಾರ
ಮತ್ತು ತರಭೇತಿ ಕೇಂದ್ರ (GTTC)) ಇದರ ಆಡಳಿತ ಮಂಡಳಿಯ ವೈಪಲ್ಯ ರಷ್ಟು ದಿಂದ ೨೨ ವಿದ್ಯಾರ್ಥಿಗಳು(ಶೇ.೫೦ ರಷ್ಟು) ಅನುತ್ತೀರ್ಣರಾಗಿದ್ದಾರೆ.

ಜಾಹೀರಾತು

ತರಬೇತಿ ಕೇಂದ್ರದಲ್ಲಿ ತರಬೇತಿ ಪಡಿಯುತ್ತಿರುವ ವಿದ್ಯಾರ್ಥಿಗಳು
ನಾವೆಲ್ಲರು ೫ನೇ ಸೆಮ್ ಹಂತದಲ್ಲಿ ಅಧ್ಯಾಯನ ಮಾಡುತ್ತಿದ್ದೇವೆ. ಸದ್ರಿ ಉಖಿಖಿಅ ಕೇಂದ್ರದಲ್ಲಿ ಬೋಧನೆ ಮಾಡುತ್ತಿರುವ ಉಪನ್ಯಾಸಕರಿಗೆ ಸರಿಯಾದ ತರಬೇತಿ ಮತ್ತು ಪರಿಣಿತಿ ಇರುವುದಿಲ್ಲ.

ಕಳೆದ ಒಂದು ವರ್ಷದ ಹಿಂದೆ ಈ ಕೇಂದ್ರಕ್ಕೆ ನೇಮಕಗೊಂಡು ಬಂದಿರುವ ಪ್ರಾಂಶುಪಾಲರಾದ ಮೌನೇಶ ರಾಠೋಡ ಹಾಗೂ ಇತರರು ಯಾವುದೊ ಯಾವುದೊ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ನೇರವಾಗಿ ಈ ಕೇಂದ್ರಕ್ಕೆ ಬಂದಿರುತ್ತಾರೆ. ಇವರಿಗೆ ಸರಿಯಾದ ತರಬೇತಿ ಕೊಡುವಂತ ಉನ್ನತ ತಾಂತ್ರಿಕ ಪರಿಣಿತಿ ಇರುವದಿಲ್ಲ ಎಂದು ಗೊತ್ತಾಗಿದೆ. ಈ ಹಿಂದೆ ಪರಿಣಿತ ಹೊಂದಿದ್ದ ಪ್ರಾಂಶುಪಾಲರಾದ ಸುರೇಶ ಹಾಗೂ ಇತರ ಉಪನ್ಯಾಸಕರನ್ನು ಪ್ರಸ್ತುತ ಪ್ರಾಂಶುಪಾಲರಾದ ಮೌನೇಶ ಇವರು ದೌರ್ಜನ್ಯ ಮಾಡಿ ಹೊರ ಕಳಿಸಿದ್ದಾರೆ. ನಾವುಗಳು ಹಿಂದಿನ ಪ್ರಾಂಶುಪಾಲರಾದ ಸುರೇಶ ರಾಠೋಡ ಮತ್ತು ಉಪನ್ಯಾಸಕರನ್ನು ಮುಂದುವರಿಸಬೇಕು ಎಂದು ವಿದ್ಯಾರ್ಥಿಗಳಾದ ನಾವುಗಳು ಸಂಬAಧಪಟ್ಟತಹ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವು.
೨೫ ರಿಂದ ೩೦ ವಿದ್ಯಾರ್ಥಿಗಳು ಮನವಿ ಪತ್ರಕ್ಕೆ ಸಹಿ ಮಾಡಿ ಅಧಿಕಾರಿಗಳಿಗೆ ಕೊಡಲಾಗಿತ್ತು. ಮನವಿ ಪತ್ರ ಕೊಟ್ಟಂತಹ ನಮ್ಮಗಳ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡ ಮೌನೇಶ ರಾಠೋಡರು ಅಂದಿನಿAದ ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಅಂದಿನಿAದ ಇಂದಿನವರೆಗೆ ಬೈಯುವುದು, ಬಡಿಯುವುದು ಮತ್ತು ತರಗತಿ ಕೋಣೆಯಲ್ಲಿ ಅವಮಾನಿಸುವುದು ಮುಂದುವರೆದಿದೆ. ತರಬೇತಿಗೆ ೨ ನಿಮಿಷ ತಡವಾಗಿ ಬಂದರೆ ಹೊರ ಹಾಕಲಾಗುತ್ತದೆ. ಇವರ ವಿರುದ್ಧ ದೂರು ಕೊಟ್ಟ ಕಾರಣದಿಂದ ೩, ೪ ನೇ ಸೆಮ್‌ನ ಎಲ್ಲಾ ವಿಷಯಗಳನ್ನು ಅನುತ್ತೀರ್ಣಗೊಳಿಸಿದ್ದಾರೆ. ನಮಗಿಂತ ಅಧ್ಯಾಯನದಲ್ಲಿ ದುರ್ಬಲವಿದ್ದ ವಿದ್ಯಾರ್ಥಿಗಳನ್ನು ಉತ್ತೀರ್ಣಮಾಡಿದ್ದಾರೆ.
ಇದಲ್ಲದೆ ಉಖಿಖಿಅ ಆರಂಭವಾದ ೨೦೨೦ ಅವಧಿಯಲ್ಲಿ ಕೋವಿಡ್ ಕಾಯಿಲೆ ಮತ್ತು ಲಾಕಡೌನ್ ಕಾರಣದಿಂದ ನಾವುಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳ ಅಧ್ಯಯನ ತರಬೆÉÃತಿ ಹಿನ್ನಡೆಯಾಗಿದೆ. ಈ ಬೆಳವಣಿಗೆಯಿಂದ ನಮ್ಮ ಅಧ್ಯಯನಕ್ಕೆ ಪೆಟ್ಟು ಬಿದ್ದಿದೆ. ಆಡಳಿತ ಮಂಡಳಿಯ ಮೌಲ್ಯಮಾಪನ ಮಾಡುವ ಪ್ರಶ್ನೆ ಉತ್ತರ ಪೇಪರಗಳನ್ನು, ಹಣ ಕೊಟ್ಟವರಿಗೆ ಮಾತ್ರ ಉತ್ತೀರ್ಣಗೊಳಿಸುತ್ತಾರೆ. ಹಣ ಕೊಡದ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುತ್ತಾರೆ. ಆಗಾಗ ಮೇಲ್ಕಾಣಿಸಿದ ವಿಷಯದ ಕುರಿತು ಸರಿಯಾಗಿ ಪರಿಶೀಲನೆ ನಡೆಸಬೇಕು. ಪ್ರಾಂಶುಪಾಲರಾದ ಮೌನೇಶ ರಾಠೋಡರನ್ನು ಸೇವೆಯಿಂದ ವಜಾಗೊಳಿಸಬೇಕು. ಪರಿಣಿತಿ ಹೊಂದಿದ್ದ ಪ್ರಾಂಶುಪಾಲರಾದ ಹಾಗೂ ಉಪನ್ಯಾಸಕರನ್ನು ಕಾಲೇಜಿಗೆ ತರಬೇಕು. ಪ್ರಿನ್ಸಿಪಾಲರ ಮೌನೇಶ ರಾಠೋಡ ಇವರ ದುರ್ನಡತೆ ಹಾಗೂ ಕರ್ತವ್ಯ ಲೋಪದಿಂದ ಉಖಿಖಿಅ ಗೆ ಕಳಂಕ ಮತ್ತು ಕೆಟ್ಟ ಪರಂಪರೆ ಅಂಟಿಕೊಳ್ಳುತ್ತದೆ.

ಈ ರೀತಿಯಾದರೆ ಭವಿಷ್ಯದಲ್ಲಿ  ಕಾಲೇಜಿಗೆ ಅಥವಾ ತರಬೇತಿ ಸಂಸ್ಥೆಗೆ ವಿದ್ಯಾರ್ಥಿಗಳು ಬರುವದಿಲ್ಲ. ಮೇಲಿನ ಪರಿಸ್ಥಿತಿ ಮರುಕಳಿಸಿದರೆ ಸಂಸ್ಥೆಯ ಬೆಳವಣಿಗೆ ಕುಂಟಿತಗೊಳ್ಳುತ್ತದೆ. ಆದ್ದರಿಂದ ತಾವುಗಳು ಸಂಬAಧಪಟ್ಟAತ ಅಧಿಕಾರಿಗಳಿಗೆ ಸೂಕ್ತವಾದ ನಿರ್ದೇಶನ ನೀಡಿ, ವಿದ್ಯಾರ್ಥಿಗಳಾದ ನಮ್ಮನ್ನು  ತರಬೇತಿ ಅಧ್ಯಯನದಲ್ಲಿ ಮುಂದುವರಿಸಲು ಕ್ರಮಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳತ್ತೇವೆ ಎಂದು ಹೊರಗುಳಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಗೂ ಪ್ರಗತಿಪರ ಚಿಂತಕರು ಹಾಗೂ ಕರ್ನಾಟಕ ರೈತ ಸಂಘ ರಾಜ್ಯ ಸಮತಿ ರಾಜ್ಯಾಧ್ಯಕ್ಷರಾದ ಡಿ.ಎಚ್.ಪೂಜಾರ, ಬಸವರಾಜ ನರೇಗಲ್ ಇನ್ನೀತರ ಮುಖಂಡರುಗಳು ಸೇರಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ನೀಡಿದರು.

About Mallikarjun

Check Also

screenshot 2025 10 17 17 14 29 84 e307a3f9df9f380ebaf106e1dc980bb6.jpg

ಬೆಳ್ಳೆತೆರೆಗೆ ಬರಲು ಸಜ್ಜಾದ “ಮಾವುತ”

Mavutha" is all set to hit the big screen ಬೆಂಗಳೂರು : ಎಸ್ ಡಿ ಆರ್ ಪ್ರೊಡಕ್ಷನ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.