Breaking News

ಕಾಯಕದಲ್ಲಿ ಕೈಲಾಸಕಂಡ ಮಹಾನ ಶರಣ ಶ್ರೀ ನುಲಿಯ ಚಂದಯ್ಯ

Kailasakanda Maha Sarana Sri Nuli Chandaiya in Kayaka

ಜಾಹೀರಾತು

ಕೊಪ್ಪಳ ಆಗಸ್ಟ್ 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಆಗಸ್ಟ್ 31ರಂದು ನಗರದ ಸಾಹಿತ್ಯ ಭವನದಲ್ಲಿ ನಡೆಯಿತು.
ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಕಾಯಕದಲ್ಲಿ ಕೈಲಾಸಕಂಡ ಮಹಾನ ಶರಣರು ಶ್ರೀ ನುಲಿಯ ಚಂದಯ್ಯನವರು. ತಮ್ಮ ವಚನಗಳ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ಶ್ರಮಿಸಿದ್ದಾರೆ. ಲಿಂಗನಿಷ್ಟೆಗಿಂತ ಕಾಯಕ ನಿಷ್ಟೆ ಮೇಲು ಎಂದು ಅವರು ಸಾರಿದ್ದಾರೆ. ತನು, ಮನ, ದನದಿಂದ ವಚನಸಾಹಿತ್ಯಕ್ಕೆ ಶ್ರಮ ವಹಿಸಿದ್ದಾರೆ. ತಮ್ಮ ಕಾಯಕವಾದ ನೂಲು ತಯಾರಿಕೆಯಿಂದ ಬಂದಂತಹ ದುಡ್ಡಿನಿಂದ ಲಿಂಗ ಜಂಗಮರಿಗೆ ಪ್ರಸಾದವ ಮಾಡಿಸುತ್ತಿದ್ದರು. ಇಂತಹ ಮಹನಿಯರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸುವುದರ ಜೊತೆಗೆ ಅವುಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
ಕಾರಟಗಿಯ ಶಿಕ್ಷಕರಾದ ಜಗದೀಶ ಭಜಂತ್ರಿ ಅವರು ಶ್ರೀ ನುಲಿಯ ಚಂದಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ, ಕಲೆ, ಸಾಹಿತ್ಯ, ವೈವಿದ್ಯಮಯ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ಹಾಗೂ ರಾಜ್ಯದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ರಾಜ್ಯದ ಚರಿತ್ರೆಯಲ್ಲಿ ಅತ್ಯಂತ ಗಮನಾರ್ಹ ಕಾಲ 12ನೇ ಶತಮಾನ. ಇದು ಒಂದು ಸುವರ್ಣಯುಗವಾಗಿದೆ. ಜಗಜೋತಿ ಬಸವೇಶ್ವರರು ಹಾಗೂ ಅನೇಕ ಶಿವಶರಣರು ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅನುಭವ ಮಂಟಪದಲ್ಲಿ ಶ್ರೇಷ್ಠ ಶರಣರಲ್ಲಿ ಒಬ್ಬರೂ ಶ್ರೀ ನುಲಿಯ ಚಂದಯ್ಯನವರು ಎಂದು ಹೇಳಿದರು.
ಶ್ರೀ ನುಲಿಯ ಚಂದಯ್ಯನವರು 1160ರಲ್ಲಿ ಇಂದಿನ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ್ದಾರೆ ಎಂದು ತಿಳಿಯುತ್ತದೆ. ಅವರ ತಂದೆ, ತಾಯಿ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದು ಬಂದಿರುವುದಿಲ್ಲ. ಹಗ್ಗ ತಯಾರಿಸುವ ಕಾಯಕದ ಮೂಲಕ ದಾಸೋಹ ಮಾಡಿಕೊಂಡು ಬಂಧಂತಹ ಶ್ರೀ ನುಲಿಯ ಚಂದಯ್ಯನವರು ಶ್ರೇಷ್ಠ ದಾಸೋಹಿಗಳಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಅಕ್ಬರಪಾಶಾ ಪಲ್ಟನ್, ಕೊಪ್ಪಳ ಗ್ರೇಡ್-2 ತಹಶೀಲ್ದಾರರಾದ ಗವಿಸಿದ್ದಪ್ಪ ಮಣ್ಣೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಸಮಾಜದ ಮುಖಂಡರಾದ ಬಳಗಾನೂರು, ಕಂಬಣ್ಣ ಭಜಂತ್ರಿ, ಬಸವರಾಜ ಓಜಿನಳ್ಳಿ, ಗ್ಯಾನಪ್ಪ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ನಾಗರಾಜ ಭಜಂತ್ರಿ, ಲಕ್ಷ್ಮಣ ಹಾಳಳ್ಳಿ, ಭೀಮಣ್ಣ ಭಜಂತ್ರಿ, ನಿಂಗಪ್ಪ ಭಜಂತ್ರಿ, ಶಿವಕುಮಾರ ಗೊಂಡಬಾಳ, ಬಸವರಾಜ, ತಿಮ್ಮಣ್ಣ ಭಜಂತ್ರಿ, ಪರಶುರಾಮ ಭಜಂತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.