Akshara Public School is an innovative program of education walking towards the village
ಗಂಗಾವತಿ:ತಂತ್ರಜ್ಞಾನದ ಯುಗಕ್ಕೆ ಅಂಟಿಕೊಂಡಿರುವ ಮಕ್ಕಳು, ಇಂಟರ್‌ನೆಟ್, ಫೇಸ್‌ಬುಕ್‌ಗಳಲ್ಲಿ ಮುಳುಗಿ ನಮ್ಮ ಸಂಸ್ಕೃತಿ ಹಾಗೂ ಜೀವನ ಕ್ರಮವನ್ನು ಮರೆಯುತ್ತಿದ್ದಾರೆ’ ಎಂದು ಅಕ್ಷರ ಪಬ್ಲಿಕ್ ಸ್ಕೂಲ್ ಮುಖ್ಯ ಉಪಾಧ್ಯಾಯನಿ ಹಿಮಾರೆಡ್ಡಿ ಹೇಳಿದರು.”
ಸೋಮವಾರ ಅಕ್ಷರ ಪಬ್ಲಿಕ್ ಶಾಲೆ ಮಕ್ಕಳಿಗೆ
ಶಿಕ್ಷಣದ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಹಿಮಾರೆಡ್ಡಿ
ಮಾತನಾಡಿದ ಅವರು, ‘ಇಂದಿನ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ನಮ್ಮ ಗ್ರಾಮೀಣ ಬದುಕನ್ನು ತಿಳಿಸಿಕೊಡಬೇಕು. ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವ ಯುವಜನಾಂಗಕ್ಕೆ ರೈತರ ನೋವು ನಲಿವುಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನಗಳು ಶಾಲಾ ಹಂತದಲ್ಲೇ ಆಗಬೇಕು. ಹಳ್ಳಿಯಲ್ಲಿ ನಡೆಯುವ ಕೃಷಿ ಕಾರ್ಯಗಳು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸಬೇಕು’ ಎಂದರು.
ಶಾಲಾಯ ನರ್ಸರಿ ಎಲ್ ಕೆ ಜಿ, ಯು ಕೆ ಜಿ, ಮಕ್ಕಳಿಗೆ ಹೊಸಳ್ಳಿ ಗ್ರಾಮದ ರೈತರೊಬ್ಬರ ಜಮಿನಿನಲ್ಲಿ ಭತ್ತದ ಸಸಿ ನೆಡೆಸುವ ಮೂಲಕ ಪ್ರಾತ್ಯಕ್ಷಿಕೆಯ ನೀಡಲಾಯಿತು.
ಈ ಸಂದರ್ಭದಲ್ಲಿ ತೇಜಸ್ವಿ, ಶಿಕ್ಷಕರು ಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.