Breaking News

ಆಗಸ್ಟ್ 29ರಂದು ಕೊಪ್ಪಳದಲ್ಲಿ ರಸಪ್ರಶ್ನೆ ಸ್ಪರ್ಧೆ: ಹೆಸರು ನೋಂದಾಯಿಸಿ


Quiz competition at Koppal on 29th August: Register name

ಜಾಹೀರಾತು

ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಜಿಲ್ಲಾ ಮಟ್ಟದ “ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ ಆಗಸ್ಟ್ 29ರಂದು ಬೆಳಗ್ಗೆ 9ಕ್ಕೆ ನಗರದ ಹಳೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದ್ದು, ಭಾಗವಹಿಸಲಿಚ್ಛಿಸುವ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಹೆಚ್.ಐ.ವಿ ಏಡ್ಸ್ ಕುರಿತು ಜಿಲ್ಲಾ ಮಟ್ಟದಲ್ಲಿ “ಯುವಜನೋತ್ಸವ” ವನ್ನು ನ್ಯಾಕೋ ಮಾರ್ಗಸೂಚಿಯಂತೆ ರಸಪ್ರಶ್ನೆ ಸ್ಪರ್ಧೆಯನ್ನು ಜಿಲ್ಲಾ, ರಾಜ್ಯ, ಪ್ರಾದೇಶಿಕ ಹಾಗೂ ರಾಷ್ಟ್ರ
ಮಟ್ಟದಲ್ಲಿ ಹಮ್ಮಿಕೊಳ್ಳುತ್ತಿದ್ದು, ಈ ಸ್ಪರ್ಧೆಯ ಮುಖ್ಯ ಉದ್ದೇಶ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು ಹಾಗೂ ಹೆಚ್.ಐ.ವಿ ಮತ್ತು ಏಡ್ಸ್ (ತಡೆ) ಕಾಯ್ದೆ 2017, ನ್ಯಾಕೋ ಏಡ್ಸ್ ಆಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್.ಟಿ.ಐ., ಇತ್ಯಾದಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದಾಗಿದೆ.
ರಸಪ್ರಶ್ನೆ ಸ್ಪರ್ಧೆಯ ಮಾರ್ಗಸೂಚಿಗಳು: ರಸಪ್ರಶ್ನೆ ಸ್ಪರ್ಧೆಯನ್ನು ಜನರಲ್ ಹೆಲ್ತ್, ಅಡೊಲೆಸ್ಕೆಂಟ್ ಹೆಲ್ತ್ ಇನ್‌ಕ್ಲುಡಿಂಗ್ ಮಾಚ್ವಲ್ ಹೈಜಿನ್, ಹೆಲ್ತಿ ಡೈಯಿಟ್, ಬಿಸಿಕ್ ಪಿಎಫ್ ಹೆಚ್.ಐ.ವಿ/ಏಡ್ಸ್ & ಸರ್ವಿಸಸ್, ವಾಲೆಂಟರಿ ಬ್ಲಡ್ ಡೊನೇಷನ್ & ಅದರ್ ಸ್ಟೇಟ್ & ನಾಷ್ನಲ್ ಹೆಲ್ತ್ ಪ್ರೋಗ್ರಾಮ್ಸ್ (General Health, Adolescent Health including menstrual hygiene, healthy diet, basics pf HIV/AIDS and Services, Voluntary Blood Donation and other State and National Health Programmes) ವಿಷಯದ ಮೇಲೆ ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗುವುದು.
ಸ್ಪರ್ಧೆಗಾಗಿ ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಒಂದು ತಂಡವಾಗಿ ಕಳುಹಿಸಿಕೊಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು. ಟಿಕೆಟ್‌ಅನ್ನು ಕಡ್ಡಾಯ ತರಬೇಕು. ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರು ವಿದ್ಯಾರ್ಥಿಗಳ ಒಂದು ತಂಡಕ್ಕೆ ಮೊದಲನೇ ಬಹುಮಾನ 5000 ರೂ., ಎರಡನೇ ಬಹುಮಾನ 4000 ರೂ., ಮೂರನೇ ಬಹುಮಾನ 3000 ರೂ. ಹಾಗೂ 1 ಸಮಾಧಾನಕರ ಬಹುಮಾನ 2000 ರೂ.ಗಳನ್ನು ನೀಡಲಾಗುವುದು.
ಈ ಸ್ಪರ್ಧೆಯಲ್ಲಿ ವಿಜೇತರಾದ ಮೊದಲನೇ ಬಹುಮಾನ ಪಡೆದ ವಿದ್ಯಾರ್ಥಿ ವಿವರವನ್ನು ಕೆ.ಎಸ್.ಎ.ಪಿ.ಎಸ್.ಗೆ ಸಲ್ಲಿಸಲಾಗುವುದು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪಿ.ಎಫ್.ಎಂ.ಎಸ್ ಮುಖಾಂತರ ನೀಡಲಾಗುವುದು. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ತಂಡದ ಹೆಸರುಗಳನ್ನು ಆಗಸ್ಟ್ 26ರೊಳಗಾಗಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಕೊಪ್ಪಳ ಕಚೇರಿಗೆ ಅಥವಾ ಇ-ಮೇಲ್ dapcukoppal1@gmail.com or dsictckpl@gmail.com ಗೆ ಕಳುಹಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಯಲ್ಲಿ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ ಅಥವಾ ಪ್ರಾಂಶುಪಾಲರ ಧೃಢೀಕರಣ ಪತ್ರಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9449843232 & 9449846981 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.