Breaking News

ಯುವತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Missing young woman: appeal for help in search

ಜಾಹೀರಾತು

ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ಗ್ರಾಮದ ನಿವಾಸಿ ರಾಧಾ ತಂದೆ ಶ್ರೀನಿವಾಸ ಬುದ್ದಾಲ ಎಂಬ ಯುವತಿಯು 2023ರ ಆಗಸ್ಟ್ 19 ರಿಂದ ಕಾಣೆಯಾಗಿದ್ದು ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 180/2023. ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತಾನು ಗಂಗಾವತಿಯ ಕಾಲೇಜಿಗೆ ಹೋಗುವುದಾಗಿ ತನ್ನ ತಾಯಿಗೆ ಹೇಳಿ ಹೋದವಳು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ. ಅವಳ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ವಿವಿಧೆಡೆ ಹುಡುಕಿದರು ಸಿಕ್ಕಿರುವುದಿಲ್ಲ‌ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಣೆಯಾದ ಯುವತಿಯ ವಯಸ್ಸು 19 ವರ್ಷ, 5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ,ತಳ್ಳನೆಯ ಮೈಕಟ್ಟು, ಕನ್ನಡ, ತೆಲಗು ಭಾಷೆ ಮಾತನಾಡುತ್ತಾಳೆ. ಮೈ ಮೇಲೆ ಚೂಡಿಧಾರ ಧರಿಸಿ ಹೋಗಿರುತ್ತಾಳೆ. ಈ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಅಥವಾ ಪತ್ತೆಯಾದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂ: 08533-230854 ಅಥವಾ ಮೊ.ಸಂ: 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಹಾಯಕ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.