MLA M R Manjunath performed Bhoomi Puja for the new building of Maramma temple

ವರದಿ : ಬಂಗಾರಪ್ಪ ಸಿ
ಹನೂರು:ತಾಲೂಕು ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದಲ್ಲಿನ ಸೇವಾಲಾಲ್ ಬಂಜಾರ ಟ್ರಸ್ಟ್ ನ ನೇತೃತ್ವದಲ್ಲಿ,ಮಾರಮ್ಮ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಎಂಆರ್ ಮಂಜುನಾಥ್ ರವರು ನೆರವೇರಿಸಿದರು.
ನಂತರ ಮಾತನಾಡಿದ ಅವರು ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದ ಎಲ್ಲಾರಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ, ದೊಮ್ಮನಗದ್ದೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಹಾಗೂ ವೈಯಕ್ತಿಕ ಧನ ಸಹಾಯ ನೀಡುವ ಮೂಲಕ ಒಂದು ಸುಂದರ ದೇವಸ್ಥಾನ ನಿರ್ಮಾಣ ಮಾಡಲು ನನ್ನ ಕೈಲಾದಷ್ಟು ನಾನು ಸಹಾಯ ಮಾಡುತ್ತೇನೆ . ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಜ್ಜಿಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರುದ್ರ ನಾಯಕ್, ಸೇವಾಲಾಲ್ ಬಂಜಾರ ಟ್ರಸ್ಟ್ ನಪದಾಧಿಕಾರಿಗಳಾದ ಕಾಶಿ ನಾಯಕ್, ಕುಮಾರ್, ಗೋಪಾಲ್, ರಾಜೇಂದ್ರ, ಬಾಲ ನಾಯಕ್, ಜೆಡಿಎಸ್ ಮುಖಂಡರುಗಳಾದ ರಾಜುಗೌಡ, ಮಾದೇವ ನಾಯಕ್, ಪ್ರಸಾದ್, ಅತಿಕ್ ಅರ್ಚಕರಾದ ಸಂಪತ್ ಇನ್ನು ಮುಂತಾದವರು ಹಾಜರಿದ್ದರು.
Kalyanasiri Kannada News Live 24×7 | News Karnataka
