Breaking News

ಮಾರ್ಟಳ್ಳಿಪಂಚಾಯ್ತಿಯ ಮನರೇಗಾ ಯೋಜನೆಯಲ್ಲಿ ಮೇರೆ ಮೀರಿದ ಅಕ್ರಮ..!

Irregularity beyond Martalli Panchayat’s Manrega scheme..!

ಜಾಹೀರಾತು


ಹನೂರು :ತಾಲ್ಲೋಖು ವ್ಯಾಪ್ತಿಯ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ
ಗಿಡ ನೆಡುವ ಕಾಮಗಾರಿಯಲ್ಲಿ ಕಮಾಯಿ ಮಾಡಿಕೊಂಡ ಅಧಿಕಾರಿ ವರ್ಗ..!!
ಆರೋಪ ಸಾಬೀತಾದರೂ ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ..!!!
ಹನೂರು ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಗಿಡ ನೆಡುವ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳು ಒಂದೊAದಾಗಿ ಬೆಳಕಿಗೆ ಬರತೊಡಗಿವೆ.
ಪ್ರಕರಣವೊಂದರಲ್ಲಿ ಓಂಬುಡ್ಸ್ಮನ್ ತನಿಖೆಯಿಂದ ಪಿಡಿಓ ಬಾಲಗಂಗಾದರ ಹಾಗೂ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್ ತಪ್ಪಿತಸ್ಥರೆಂದು ಸಾಬೀತಾಗಿ ಸುಮಾರು ಒಂದು ಲಕ್ಷದಷ್ಟು ದುರ್ಬಳಕೆ ಹಣವನ್ನು ಮರುಪಾವತಿಸುವಂತೆ ಆದೇಶವಾದ ತದ ನಂತರದಲ್ಲೂ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬಂದಿವೆ. ಈ ಸಂಬAಧ ಅನ್ಯಾಕ್ಕೊಳಗಾದವರು ಅಕ್ರಮಕ್ಕೆ ಪೂರಕವಾದ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮೀನ-ಮೇಷ ಎಣಿಸುತ್ತಿರುವ ಜಿಲ್ಲಾಡಳಿತದ ನಡೆ ನಾನಾ ಸಂಶಯಕ್ಕೆ ಎಡೆ ಮಾಡಿಕೊಟ್ಟಿರುವುದಾಗಿ ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಗಿಡ ನೆಡುವ ಕಾಮಗಾರಿಯಲ್ಲಿ ಇದೀಗ ಮೂರನೆಯ ಅಕ್ರಮವೊಂದು ಬೆಳಕಿಗೆ ಬಂದಿದೆ. ಮಾರ್ಟಳ್ಳಿ ಗ್ರಾಮದ ವಿಕ್ಟೋರಿಯಾ ಗ್ರೇಸಿ ಕೋಂ ಸಿಂಗರಾಯರ್ ಎಂಬುವರ ಬಳಿ ಹಳೇ ಮಾರ್ಟಳ್ಳಿ ಗ್ರಾಮದ ಗ್ರಾ.ಪಂ.ಸದಸ್ಯ ನಿಕೋಲಾಸ್‌ರವರ ಪುತ್ರ ಅಪ್ಪು ಎಂಬಾತ ಬಂದು ಗ್ರಾಮ ಪಂಚಾಯತಿಯಿAದ ಉಚಿತ ಗಿಡ ನೆಡುವ ಯೋಜನೆ ಬಂದಿದ್ದು ಕೇವಲ ೨೦ ಸಾವಿರ ನೀಡಿದರೆ ಉಚಿತ ಶ್ರೀಗಂಧದ ಸಸಿಗಳನ್ನು ನೆಡಿಸಿಕೊಡುವುದಾಗಿ ಹೇಳಿದನಂತೆ. ಅದಕ್ಕೆ ಸಿಂಗರಾಯರು ಒಪ್ಪಿಗೆ ನೀಡಿದ ಬಳಿಕ ಗುಳಿ ತೋಡುವ ಯಂತ್ರದೊಂದಿಗೆ ಬಂದ ಅಪ್ಪು ರೈತರ ಮಾರ್ಟಳ್ಳಿ ಸ.ನಂ. ೧೩೬ ರಲ್ಲಿ ಒಂದೇ ದಿನದಲ್ಲಿ ಯಂತ್ರದಿAದ ೪೫೦ ಗುಂಡಿಗಳನ್ನು ತೋಡಿ ಶ್ರೀಗಂಧದ ಸಸಿಗಳನ್ನು ನೆಡಿಸಿ ಹೋದನಂತೆ.
ನಂತರದಲ್ಲಿ ಸಿಂಗರಾಯರನ್ನು ಜಮೀನಿನ ಬಳಿ ನಿಲ್ಲಿಸಿ ಪೊಟೋ ತೆಗೆದುಕೊಂಡನAತೆ. ತದ ನಂತರ ಸದರಿ ಜಮೀನಿನಲ್ಲಿ ಕಾಮಗಾರಿಯ ನಾಮಫಲಕ ಕೂಡ ಅಳವಡಿಸಿದ್ದು ಅದರಲ್ಲಿ ಮನರೇಗಾ ಯೋಜನೆಯಡಿ ವಿಕ್ಟೋರಿಯಾ ಗ್ರೇಸಿ ರವರ ಜಮೀನಿನಲ್ಲಿ ೨೦೨೨-೨೩ ರಲ್ಲಿ ಶ್ರೀಗಂಧ ಹಾಗೂ ಹೆಬ್ಬೇವು ಸಸಿಗಳನ್ನು ನೆಡುವ ಕಾಮಗಾರಿ ನಡೆಸಿರುವುದಾಗಿ ಕಾಮಗಾರಿಯ ಸಂಖ್ಯೆಯೊAದಿಗೆ ನಮೂದಿಸಲಾಗಿದೆಯಾದರೂ ಅಂದಾಜು ಮೊತ್ತ, ಸೈ, ಮಾ, ದಿನಗಳು, ಕಾ/ಪ್ರಾ/ದಿ, ಕೂಲಿ ಮೊತ್ತ, ಸಾಮಾಗ್ರಿ ಸೇರಿದಂತೆ ಒಟ್ಟು ಮೊತ್ತದ ಕಾಲಂಗಳನ್ನು ಕಾಲಿ ಬಿಡಲಾಗಿದೆ.
ತದ ನಂತರದಲ್ಲಿ ನನ್ನಿಂದ ಪಡೆದುಕೊಂಡದ್ದ ಜಮೀನಿನ ದಾಖಲೆಗಳನ್ನು ಪೋರ್ಜರಿ ಮಾಡಿ ಮನರೇಗಾ ಯೋeನೆಯಡಿ ಕೂಲಿಯಾಳುಗಳಿಂದ ಗಿಡ ನೆಡುವ ಕಾಮಗಾರಿ ನಡೆಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ವಿವಿದ ಬೇನಾಮಿ ಹೆಸರುಗಳಲ್ಲಿ ಎನ್‌ಎಂಆರ್ ತೆಗೆದು ೧ ಲಕ್ಷದ ೧೮ ಸಾವಿರ ರೂ ಬಿಡುಗಡೆಗೊಳಿಸಿ ದುರ್ಬಳಕೆ ಮಾಡಿಕೊಂಡಿದ್ದು ಪಂಚಾಯ್ತಿ ದಾಖಲೆಗಳಲ್ಲಿ ಮುಂದುವರೆದ ಕಾಮಗಾರಿ ಎಂದು ನಮೂದಿಸಿರುವುದನ್ನು ಪತ್ತೆ ಹಚ್ಚಿದ ಜಮೀನಿನ ಮಾಲೀಕರು, ಅಪ್ಪು ನೆಡಿಸಿದ್ದ ನಂತರದಲ್ಲಿ ಶ್ರೀಗಂಧದ ಸಸಿಗಳ ಮದ್ಯೆ ತಾವು ವೈಯುಕ್ತಿಕವಾಗಿ ಹೆಬ್ಬೇವು ಗಿಡದ ಬೀಜಗಳನ್ನು ನೆಡಿಸಿದ್ದು ಇನ್ನೂ ಗಿಡ ಬರುವ ಹಂತದಲ್ಲಿದೆ. ವಾಸ್ತವ ಹೀಗಿರುವಾಗ ಅವರೆಲ್ಲಿ ಹೆಬ್ಬೇವು ಸಸಿಗಳನ್ನು ನೆಡಿಸಿದ್ದಾದರು ಹೇಗೆ.? ಎಂದು ಪ್ರಶ್ನಿಸಿರುವ ರೈತ ಸಿಂಗರಾಯರು, ಈ ಅಕ್ರಮದ ಬಗ್ಗೆ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಡಿಸಿ ವiತ್ತಿತರರಿಗೆ ದೂರು ಸಲ್ಲಿಸಿದ್ದು ತನಿಖೆ ನಡೆಸಿ ಮೆಟಿರೀಯಲ್ ಬಿಲ್ ಸೇರಿದಂತೆ ಉಳಿಕೆ ಬಿಲ್ಲನ್ನು ತಡೆ ಹಿಡಿದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.
ಪಂಚಾಯ್ತಿ ದಾಖಲೆಯಲ್ಲಿ ನಮೂದಾಗಿರುವ ಎನ್‌ಎಂಆರ್ ತೆಗೆದು ಕೂಲಿ ಹಣ ನೀಡಿರುವವರ ಸಂಪೂರ್ಣ ಹೆಸರು ವಿಳಾಸ ಭಾವಚಿತ್ರಗಳ ವಿವರ, ಕಾಮಗಾರಿಯ ಸ್ಥಳದಲ್ಲಿ ತೆಗೆದಿರುವ ಕೂಲಿಯಾಳುಗಳ ಭಾವಚಿತ್ರಗಳನ್ನು ಪರಿಶೀಲಿಸಿದಲ್ಲಿ ಸತ್ಯಾಸತ್ಯತೆ ಬೆಳಕಿಗೆ ಬರಲಿರುವುದಾಗಿ ಹೇಳಿದ್ದಾರೆ.
ಪ್ರಪ್ರಥಮ ಭಾರಿಗೆ ಮನರೇಗಾ ಯೋಜನೆಯಡಿ ಗಿಡ ನೆಡುವ ಕಾಮಗಾರಿಯಲ್ಲಿನ ಅಕ್ರಮವೊಂದು ವಡ್ಡರದೊಡ್ಡಿಯ ಯುವ ವಿದ್ಯಾವಂತ ರೈತ ದಿವ್ಯಾನಂದನ ದೂರಿನಿಂದ ಬೆೆಳಕಿಗೆ ಬಂತು. ಬಳಿಕ ಇದೇ ವಂಚಕರು ಮತ್ತು ಕೆಲ ಸದಸ್ಯರು ಶಾಮೀಲಾಗಿ ಬಾಳೆ ಬೆಳೆದಿರುವ ರೈತ ರಾಯಪ್ಪನ್ ತೋಟದಲ್ಲಿ ಮನರೇಗಾ ಯೋಜನೆಯಡಿ ಕಾಡು ಸಸಿಗಳನ್ನು ನೆಟ್ಟಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ೧-೯೧ ಲಕ್ಷ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಅದೇ ಪಂಚಾಯ್ತಿಯ ಒಂದನೇ ವಾರ್ಡ್ ಸದಸ್ಯ ಚಂದ್ರನ್ ನಾಯ್ಕ ಮತ್ತಿತರೆ ಗ್ರಾಮಸ್ತರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಆಯುಕ್ತರು, ಡಿಸಿ, ಸಿಇಓ ಮತ್ತಿತರರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು.
೨೦೨೦-೨೧ ೨೦೨೨-೨೩ ನೇ ಸಾಲುಗಳಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಮನರೇಗಾ ಯೋಜನೆಯಡಿ ಕೈಗೊಂಡಿರುವ ಗಿಡ ನೆಡುವ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಪಿಡಿಓ ಬಾಲಗಂಗಾದರ, ತಾಂತ್ರಿಕ ಸಹಾಯಕ ಎಂ.ಪ್ರದೀಪ್ ಕುಮಾರ್ ಮತ್ತಿತರೆ ಕೆಲವು ಪಂಚಾಯ್ತಿ ಸದಸ್ಯರು ಶಾಮೀಲಾಗಿ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಬಿಡುಗಡೆಗೊಳಿಸಿ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಪುರಾವೆಯಾಗಿ ಸದ್ಯಕ್ಕೆ ಈ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ.
ಒಟ್ಟಾರೆ ಈ ಯೋಜನೆಯಲ್ಲಿ ಈ ಪಂಚಾಯ್ತಿ ವ್ಯಾಪ್ತಿಯ ಸುತ್ತಮುತ್ತಲ ಹಳ್ಳಿಗಳ ಇನ್ನೂ ಬಹುತೇಕ ಮುಗ್ದ ರೈತರಿಗೆ ವಂಚಿಸಿದ್ದು ಪ್ರಕರಣಗಳು ಒಂದೊAದಾಗಿ ಬೆಳಕಿಗೆ ಬರತೊಡಗಿದಂತೆ ಎಚ್ಚೆತ್ತುಕೊಂಡ ಪಂಚಾಯ್ತಿ ಅಧಿಕಾರಿಗಳು ಈ ಪ್ರಕರಣಗಳ ಪ್ರುಮುಖ ರೂವಾರಿಯಾದ ಗ್ರಾ.ಪಂ.ಸದಸ್ಯ ನಿಕೋಲಾಸ್ ಹಾಗೂ ಆತನ ಪುತ್ರ ಅಪ್ಪುವಿನ ಮೂಲಕ ಇವರುಗಳು ವಂಚಿಸಿರುವ ರೈತರುಗಳ ಮನೆ ಮನೆ ಬಾಗಿಲಿಗೆ ತೆರಳಿ ದೂರು ನೀಡದಂತೆ ಮನವೊಲಿಸಿ ತಾವು ಕಬಳಿಸಿರುವುದರಲ್ಲಿ ಕೆಲ ಭಾಗದ ಹಣವನ್ನು ನೀಡಿ ಕೈ ಕಾಲು ಹಿಡಿದು ಬೇಡಿಕೊಂಡು ಪ್ರಕರಣವನ್ನು ಮುಚ್ಚಿಹಾಕುವ ಹೊಸ ತಂತ್ರವಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆÉ.
ಒಟ್ಟಾರೆ ಈ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳು ನಿಚ್ಚಳವಾಗಿರುವ ಕಾರಣ ಕೂಡಲೇ ಈ ಯೋಜನೆಯ ಎಲ್ಲಾ ಫಲಾನುಭವಿಗಳ ಜಮೀನು ಹಾಗೂ ಪಂಚಾಯ್ತಿಯಲ್ಲಿ ಕಡತಗಳನ್ನು ಪರಿಶೀಲಿಸಿ ತಾಳೆ ನೋಡಿದಲ್ಲಿ ಅಕ್ರಮ ಅವ್ಯವಹಾರಗಳ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲದ ಕಾರಣ ತಾವೂ ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳನ್ನು ಹೊರತು ಪಡಿಸಿ ತಮ್ಮ ಹಂತದಲ್ಲಿನ ವಿಶೇಷ ತನಿಖಾ ತಂಡವನ್ನು ಕಳುಹಿಸಿ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗಟ್ಟುವುದರ ಜತೆಗೆ ಇವರುಗಳಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟಕ್ಕೆ ಇವರುಗಳ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗಲಾದರೂ ಜಿಲ್ಲಾಡಳಿತ, ಸಾಕ್ಷಾö್ಯಧಾರಗಳನ್ನು ನಾಶ ಪಡಿಸುವ ತಿದ್ದುವ ಸಾಧ್ಯತೆಗಳಿರುವುದರಿಂದ ತತ್‌ಕ್ಷಣದಿಂದಲೇ ತಪ್ಪಿತಸ್ಥ ಪಿಡಿಓ ಬಾಲಗಂಗಾದರ್‌ರನ್ನು ಅಮಾನತುಗೊಳಿಸಿ ಕೂಡಲೇ ಮನರೇಗಾ ಸಂಪೂರ್ಣ ಕಡತಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದಲ್ಲಿ ಇನ್ನೂ ಹೆಚ್ಚಿನ ಅಕ್ರಮಗಳು ಬೆಳಕಿಗೆ ಬರುವುದರಲ್ಲಿ ಸಂಶಯವಿಲ್ಲವೆಂದಿರುವ ದೂರುದಾರರು ಹಾಗೂ ಗ್ರಾಮಸ್ತರುಗಳು ವಿಳಂಬ ಧೋರಣೆ ಅನುಸರಿಸಿದಲ್ಲಿ ಜಿಲ್ಲಾಡಳಿತ ಭವನದ ಮುಂದೆ ವಿವಿಧ ಹಂತದ ಹೋರಾಟ ಹಮ್ಮಿಕ್ಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.