Contribution to government schools is worthwhile: Durugappa Nadalmani

ಗಂಗಾವತಿ: ಕಡು ಬಡತನದಲ್ಲಿ ಬಹುತೇಕ ಮಕ್ಕಳು ಸರಕಾರಿ ಶಾಲೆಗಳಲ್ಲಿ
ಓದುತ್ತಿದ್ದು ಇಂಥ ಶಾಲೆಗಳಿಗೆ ಕೊಡುಗೆ ನೀಡಿದರೆ ಅದು
ಶ್ರೇಷ್ಠದಾನವಾಗುತ್ತದೆ, ಸಾರ್ಥಕತೆ ಪಡೆದುಕೊಳ್ಳುತ್ತದ ಎಂದು ಎಸ್‌ಡಿಎಂಸಿ
ಅಧ್ಯಕ್ಷ ದುರುಗಪ್ಪ ನಡುಲಮನಿ ಹೇಳಿದರು.
ಅವರು ಸಮೀಪದ ವಡ್ಡರಹಟ್ಟಿ ಕ್ಯಾಂಪ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ಎಸ್.ಮುರಳಿಯವರಿಂದ ಕ್ರೀಡಾ ಸಾಮಾಗ್ರಿ ದೇಣಿಗೆ ಸ್ವೀಕರಿಸಿ
ಮಾತನಾಡಿದರು. ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಪಾಲಕರು
ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ, ತಮ್ಮದೆ ಆದ ಕೊಡುಗೆ ನೀಡುವ
ಮೂಲಕ ಅಂಥ ಶಾಲೆಗಳನ್ನು ಉದ್ದರಿಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ದೇಣಿಗೆ ನೀಡಿದ ಎಸ್.ಮುರಳಿ ಕೃಷ್ಣ, ಟಿ.ಗೌಸ್‌ಸಾಬ್, ದಾನಿಗಳಾದ
ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ.ಗೌಸ್‌ಸಾಬ್, ಖಾಸೀಂಸಾಬ್, ಎಸ್‌ಡಿಎಂಸಿ
ಉಪಾಧ್ಯಕ್ಷರಾದ ಪ್ರೀಯದರ್ಶಿನಿ ಗುರುಪ್ರಸಾದ್ ನಾಯಕ ಮತ್ತು ಶಾಲಾ
ಮುಖ್ಯಗುರು, ಶಿಕ್ಷಕರು ಪಾಲ್ಗೊಂಡಿದ್ದರು.