Breaking News

ನಲಿನ್ ಅತುಲ್ ಕೊಪ್ಪಳ ಜಿಲ್ಲಾ ನೂತನ ಜಿಲ್ಲಾಧಿಕಾರಿ

Nalin Atul is the new district collector of Koppal district

ಜಾಹೀರಾತು

ಕೊಪ್ಪಳ ಆಗಸ್ಟ್ 18 (ಕರ್ನಾಟಕ ವಾರ್ತೆ): ಐಎಎಸ್ ಅಧಿಕಾರಿ ನಲಿನ್ ಅತುಲ್ ಅವರು ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಆಗಸ್ಟ್ 18ರಂದು ಅಧಿಕಾರ ಸ್ವೀಕರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಸಾಮಾಜಿಕ ಲೆಕ್ಕಪರಿಶೋಧನೆಯ ನಿರ್ದೇಶಕರಾಗಿದ್ದ ನಲಿನ್ ಅತುಲ್ ಅವರು ಅಲ್ಲಿಂದ ವರ್ಗಾವಣೆಯಾಗಿ ಇದೀಗ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾರೆ. ನಿರ್ಗಮಿತ ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ನೂತನ ಜಿಲ್ಲಾಧಿಕಾರಿ ಅವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
2014ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ನಲಿನ್ ಅತುಲ್ ಅವರು ಮೂಲತಃ ಬಿಹಾರ ರಾಜ್ಯದವರಾಗಿದ್ದಾರೆ. ಈ ಮೊದಲು ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಯಾಗಿ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಮತ್ತಿತರರಿದ್ದರು.

About Mallikarjun

Check Also

screenshot 2025 12 01 18 24 04 48 e307a3f9df9f380ebaf106e1dc980bb6.jpg

ಕಾರ್ಖಾನೆ ವಿರೊಧಿ ಹೋರಾಟದಲ್ಲಿ ಕ್ರಿಸ್ಮಸ್ ಶುಭಾರಂಭ ಮಾಡಿದ ಕ್ರೆöÊಸ್ತರು ಸಂಕಷ್ಟದಲ್ಲಿ ಉದ್ಯೋಗ ನೀಡಿದ್ದು ಕೃಷಿ, ಕಾರ್ಖಾನೆಯಲ್ಲ: ಸಿ.ಬಿ. ಪಾಟೀಲ್

ಕಾರ್ಖಾನೆ ವಿರೊಧಿ ಹೋರಾಟದಲ್ಲಿ ಕ್ರಿಸ್ಮಸ್ ಶುಭಾರಂಭ ಮಾಡಿದ ಕ್ರೆöÊಸ್ತರು ಸಂಕಷ್ಟದಲ್ಲಿ ಉದ್ಯೋಗ ನೀಡಿದ್ದು ಕೃಷಿ, ಕಾರ್ಖಾನೆಯಲ್ಲ: ಸಿ.ಬಿ. ಪಾಟೀಲ್ Christians …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.