Let’s pay the debt of Bhutai-Sahiti SB Kuchabala
.
ಚಿಟಗುಪ್ಪ: ತಾಯಿ ಭಾರತಾಂಬೆಯ ಹೆಮ್ಮೆಯ ಪುಣ್ಯ ಭೂಮಿ ಭರತಭೂಮಿ, ಈ ಭೂತಾಯಿಯ ಋಣ ತೀರಿಸಲು ಕಟ್ಟಿಬದ್ದರಾಗಿ, ದೇಶದ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಇದೆ ಎಂದು ಸಾಹಿತಿ ಎಸ್ ಬಿ ಕೂಚಬಾಳ ಹೇಳಿದರು.
ಪಟ್ಟಣದ ಗೌರಿಬಾಯಿ ಅಗರವಾಲ್ ಕನ್ಯಾ ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಚಿಟಗುಪ್ಪ ತಾಲೂಕು ಘಟಕ ಹಾಗೂ
ದಕ್ಷಿಣ ಮಧ್ಯ ವಲಯ ಸಾಂಸ್ಕೃತಿ ಕೇಂದ್ರ ನಾಗಪುರ ರವರ ಸಂಯುಕ್ತಾಶ್ರಯದಲ್ಲಿ ಸ್ವತಂತ್ರ ಅಮೃತ್ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಎನ್ನುವ ಸಮಾರಂಭದಲ್ಲಿ ಮಾತನಾಡಿದ ಅವರು ಮಣ್ಣು ತಾಯಿ ಸಮ, ತಾಯಿಯ ಸೇವೆಗೆ ಸದಾ ಕಾಲ ನಾವೆಲ್ಲರೂ ಸಿದ್ಧರಾಗಿ ದುಡಿಯಬೇಕು. ಅಂದಾಗಲೇ ನಾವು ಇಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ ಆಗುತ್ತದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ, ಸಾಹಿತಿ ಸಂಗಮೇಶ ಎನ್ ಜವಾದಿ ಯವರು ಮಾತನಾಡಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಿ ಭೂಮಿ ಫಲವತ್ತತೆ ಕಾಪಾಡಬೇಕು.ಮರ ಗಿಡಗಳನ್ನು ರಕ್ಷಣೆ ಮಾಡಿ, ಪರಿಸರ ಸಂರಕ್ಷಣೆ ಮಾಡಬೇಕು.ದೇಶದ 76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೇರಿ ಮಿಟ್ಟಿ ಮೇರಾ ದೇಶ್ ಎಂಬ ಅಭಿಯಾನವನ್ನು ದೇಶಾದ್ಯಂತ ಹುತಾತ್ಮ ವೀರ ಯೋಧರಿಗೆ ಗೌರವವಿಸುವ ಕಾರ್ಯ ಆಗುತ್ತಿರುವುದು ಹೆಮ್ಮೆಯ ಸಂಗತಿ.
ಭೂತಾಯಿಗೆ ಹಾಗೂ ವೀರಯೋಧರಿಗೆ,ಸ್ವಾತಂತ್ರ್ಯ ಹೋರಾಟಗಾರರಿಗೆ ಕೋಟಿ ಕೋಟಿ ನಮನಗಳು,ವಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ವಿಜ್ಞಾನ ಪರಿಷತ್ತು ಸದಸ್ಯ, ಕಜಾಪ ಗೌರವಾಧ್ಯಕ್ಷ ಮಾಹಾರುದ್ರಪ್ಪ ಅಣದೂರ ಜಾನಪದ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು.
ಶಾಲೆಯ ಮಕ್ಕಳು, ಶಿಕ್ಷಕಿ,ಶಿಕ್ಷಕರಿಂದ ಜಾನಪದ ಗಾಯನಗಳು ಜರುಗಿದವು.ಸೋನಮ್ಮ ಜಾನಪದ ಕಲಾ ತಂಡದವರಿಂದ ಜಾನಪದ ಗಾಯನ ಮೊಳಗಿ, ಸರ್ವರ ಮನೆಗಳನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನಪ್ಪಾ ನೆಲ್ವಾಳೆ ರವರು ವಹಿಸಿದ್ದರು.
ಕಜಾಪ ಗೌರವಾಧ್ಯಕ್ಷ ನೀಲಕಂಠರಾವ ಇಸ್ಲಾಂಪೂರ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಅಶೋಕ್ ಮಠಪತಿ, ರಾಘವೇಂದ್ರ ಕುಲಕುರ್ಣೀ, ಪ್ರೇಮಲತಾ ಸ್ವಾಮಿ, ಸುಮಂಗಲಾ ಪವಾರ್, ಸಾವಿತ್ರಿ ಪಾಟೀಲ, ಶರಣಪ್ಪಾ ಡಿಗ್ಗಾಂವಿ,ಭೀಮಶಾ ಕೆರಳ್ಳಿ
ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಸಂಗೀತ ಕಲಾವಿದರು, ಗಣ್ಯರು,ಮಕ್ಕಳು ಉಪಸ್ಥಿತರಿದ್ದರು.