Breaking News

ರಾಂಪೂರ:೧೧ಎ ಉಪಕಾಲುವೆಗೆ ಬಾರದ ನೀರು ಭತ್ತ ನಾಟಿ ಮಾಡಲು ರೈತರಿಗೆ ಸಂಕಷ್ಟ

Rampura: Water not reaching 11A sub-canal makes it difficult for farmers to plant paddy

ಜಾಹೀರಾತು

ಗಂಗಾವತಿ: ತಾಲೂಕಿನ ರಾಂಪೂರ-ಮಲ್ಲಾಪೂರ ತುಂಗಭದ್ರಾ ಎಡದಂಡೆ ಕಾಲುವೆಯ ೧೧ಎ ಉಪಕಾಲುವೆ ಕಳೆದ ೨೦ ವರ್ಷಗಳಿಂದ ದುರಸ್ತಿ ಮಾಡದೇ ಇರುವುದರಿಂದ ಕೊನೆ ಭಾಗದ ರೈತರ ಗದ್ದೆಗಳಿಗೆ ಇನ್ನೂ ನೀರು ತಲುಪಿಲ್ಲ. ಭತ್ತದ ಸಸಿ ಮಡಿ ಕೈಗೆ ಬಂದಿದ್ದು ನೀರಿ ಕೊರತೆಯ ಪರಿಣಾಮ ರಾಂಪೂರ, ಮಲ್ಲಾಪೂರ, ಸಂಗಾಪೂರ ಮತ್ತು ಆನೆಗೊಂದಿ ಭಾಗದ ೩೦೦ ಎಕರೆ ಪ್ರದೇಶದ ರೈತರು ಭತ್ತದ ನಾಟಿ ಮಾಡಲು ಆಗದೇ ಸಂಕಷ್ಟದಲ್ಲಿದ್ದು ೧೧ಎ ಕಾಲುವೆಗೆ ಸೋಮವಾರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಉಪಕಾಲುವೆ ತಾತ್ಕಲಿಕ ದುರಸ್ತಿ ಮಾಡಿ ಕೊನೆ ಭಾಗದ ರೈತರಿಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾದ ಪಾಂಡು, ಸತ್ಯನಾರಾಯಣರೆಡ್ಡಿ ಮಾತನಾಡಿ, ೧೧ಎ ವಿತರಣಾ ಕಾಲುವೆ ಕಳೆದ ೨೦ ವರ್ಷಗಳಿಂದ ಹೂಳು ತುಂಬಿ ನೀರು ಹರಿದ ಸ್ಥಿತಿ ಇದ್ದು ರೈತರ ಕೇಡುಗಾಲುವೆಯ ಮೂಲಕ ನೀರು ಪಡೆದು ಬೆಳೆಯನ್ನು ಬೆಳೆಯಲಾಗುತ್ತಿದೆ. ಹಲವು ಭಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸದ್ಯ ವಿಜಯನಗರ ಕಾಲುವೆ ದುರಸ್ತಿ ಮಾಡುತ್ತಿರುವ ಗುತ್ತಿಗೆದಾರರಿಂದ ತಾತ್ಕಲಿಕ ಹೂಳು ತೆಗೆದು ಕಾಮಗಾರಿ ಮಾಡಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದು ಬೇಗನೆ ಕಾಮಗಾರಿ ಆರಂಭಿಸುವAತೆ ಕೋರಿದರು.
ಎಇಇ ಅಮರೇಶ ಕಂಪ್ಲಿ ರೈತರ ಮನವಿಗೆ ಸ್ಪಂದಿಸಿ ಈಗಾಗಲೇ ೧೧ಎ ವಿತರಣಾ ಕಾಲುವೆ ದುರಸ್ತಿ ಮಾಡಲು ಹಲವು ಭಾರಿ ಡಿಪಿಆರ್ ಸಿದ್ದ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಟೆಂಡರ್ ಕರೆದಿಲ್ಲ. ಆದರೂ ರೈತರ ಮನವಿ ಹಿನ್ನೆಲೆಯಲ್ಲಿ ಜೆಸಿಬಿಯ ಮೂಲಕ ಹೂಳು ತೆಗೆಸಿ ನೀರು ಕೊಡಲಾಗುತ್ತದೆ. ಮುಂದಿನ ಬೇಸಿಗೆ ಹಂಗಾಮಿನಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ದುರಸ್ತಿ ಮಾಡಿಸಲಾಗುತ್ತದೆ ಎಂದರು.
ಎಇ ಅಮರೇಶ, ರೈತರಾದ ಪಾಂಡು, ಭಾಸ್ಕರ್ ರೆಡ್ಡಿ, ಪರಶುರಾಮ, ನವೀನರೆಡ್ಡಿ, ಶ್ರೀನಿವಾಸ ರೆಡ್ಡಿ, ಸುರೇಶ, ಕಾಶಿನಾಥ, ವೆಂಕಟೇಶ, ಧನಂದಜಯ, ವೀರಾರೆಡ್ಡಿ ಸೇರಿ ಗ್ರಾಮಸ್ಥರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.