Massive meeting led by Maniyar demanding establishment of Corporation Board for Arishankeri
ಗಂಗಾವತಿ: ಕಳೆದ ೨೦ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿರುವ ಒಳಬಳ್ಳಾರಿ ಹನುಮಂತಪ್ಪ ಅರಿಷಣಕೆರಿಯವರಿಗೆ ಕುರಿ ಮತ್ತು ಉಣ್ಣೆ ನಿಗಮ ಅಥವಾ ಯಾವುದಾದರು ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷ ಸಂಘಟನೆಗೆ ಶಕ್ತಿ ತುಂಬಬೇಕೆAದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್‌ಸಾಬ್ ಮನಿಯಾರ್ ಹೇಳಿದರು.
ಅವರು ನಗರದ ಎಸ್‌ಎಸ್‌ಎಲ್‌ಆರ್ ಹಾಲ್‌ನಲ್ಲಿ ಬೃಹತ್ ಕಾರ್ಯಕರ್ತರ ಸಭೆಗು ಮುನ್ನಾ ಸುದ್ದಿಗೋಷ್ಟಿಯನ್ನುದ್ದೇಶಿಸಿ ಸೋಮವಾರ ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ತಮ್ಮ ತನುಮನಧನ ವಿನಿಯೋಗಿಸಿ ಈ ಬಾರಿಯ ಚುನಾವಣೆಯಲ್ಲಿ ದುಡಿದ ಅನೇಕರಿದ್ದಾರೆ. ಯಾವೊಬ್ಬ ಕಾರ್ಯಕರ್ತ ಅಭ್ಯರ್ಥಿಯೊಂದಿಗೆ ಹಣ ಪಡೆಯದೆ ಯೋಗ್ಯತಾನುಸಾರ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದು, ಐದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ ಬಂದಿರುವ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಾದ್ದು ಪ್ರತಿ ಅಭ್ಯರ್ಥಿಯ ಕರ್ತವ್ಯ, ಆದರೆ ಪಕ್ಷ ಗೆಲ್ಲುವಲ್ಲಿ ಅಭ್ಯರ್ಥಿಯ ನಿಷ್ಕಾಳಜಿಯೆ ಪ್ರಮುಖ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಮೇ ತಿಂಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿದ್ದೆ, ಆದರೆ ಸಚಿವ ತಂಗಡಗಿ, ಡಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅನ್ಸಾರಿ ಸಹ ರಾಜೀನಾಮೆ ಒಪ್ಪಿರಲಿಲ್ಲ ಲೋಕಸಭಾ ಚುನಾವಣೆ ವರೆಗು ಮುಂದುವರೆಯುವAತೆ ಸೂಚಿಸಿದ್ದರು. ಅದೇ ಪ್ರಕಾರ ನಾನು ಕಾರ್ಯ ನಿರ್ವಹಿಸುತ್ತಿರುವೆ ಸಲ್ಲದ ಹೇಳಿಕೆ (ಅನ್ಸಾರಿ) ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ನಾನು ಪಕ್ಷ ನಿಷ್ಠ ಲೋಕಸಭಾ ಚುನಾವಣೆಗೆ ಅನ್ಸಾರಿಗೆ ಟಿಕೇಟ್ ನೀಡಿದರು. ದುಡಿಯುವೆ, ಅರಿಷಣಕೆರಿಗೆ ನಿಗಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಸಿಎಂ, ಕೆಪಿಸಿಸಿ ಅಧ್ಯಕ್ಷರು ಇತರೆ ಎಲ್ಲಾ ನಾಯಕರಲ್ಲಿ ಮನವಿ ಸಲ್ಲಿಸಲಾಗುವುದು ಎಂದರು.
ಗಂಗಾವತಿ ತಾಲೂಕಾ ಪಂಚಾಯಿತಿ ಮಾಜಿ ಅಧ್ಯಕ್ಷ ಶರಣೇಗೌಡ ಬಸಾಪಟ್ಟಣ ಇವರು ಮಾತನಾಡಿ, ಅರಿಷಣಕೆರಿಯವರು ದಾನ ಧರ್ಮ ಹಾಗು ಪರೋಪಕಾರಿ ಗುಣದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಾಯಕ, ಅವರು ತಂದೆ ಕಾಲದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರು ಕೂಡಾ ತಾಲೂಕಾ ಪಂಚಾಯಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಅವರ ಸೇವೆ ಪರಿಗಣಿಸಿ ಅವರಿಗೆ ನಿಮಗ ಮಂಡಳಿ ನೀಡಿದರೆ ಪಕ್ಷ ಬಲವರ್ದನೆಗೊಳ್ಳುತ್ತದ ಎಂದು ಕಿವಿಮಾತು ಹೇಳಿದರು.
ಯುಥ್ ಕಾಂಗ್ರೆಸ್ ನಗರಾಧ್ಯಕ್ಷ ಆಸೀಫ್ ಮಾತನಾಡಿ, ಅರಿಷಣಕೇರಿ ಹನುಮಂತಪ್ಪ ಅತ್ಯಂತ ಶಿಸ್ತಿನ ವ್ಯಕ್ತಿಯಾಗಿದ್ದು ಆತನನ್ನು ಒಕ್ಕೋರಲಿನಿಂದ ಕಾಂಗ್ರೆಸ್ ಪಕ್ಷ ನಿಗಮ ಮಂಡಳಿಗಾಗಿ ಒತ್ತಾಯಿಸುತ್ತದೆ ಎಂದರು.
ಫ್ರೂಟ್ ಬಾಬಾ ಮಾತನಾಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಆಲಸ್ಯತನ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣವಾಗಿದೆ. ಕಾರ್ಯಕರ್ತರ ಭಾವನೆಗೆ ಸ್ಪಂದಿಸಲು ಅವರು ಸಿಕ್ಕುವುದೇ ಇಲ್ಲ, ಗ್ರಾಮೀಣ ಹಾಗು ನಗರದಲ್ಲಿನ ಅನೇಕ ಕಾರ್ಯಕರ್ತರು ಬೇಸತ್ತಿದ್ದಾರೆ ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಪ್ರತ್ಯೇಕವಾಗಿ ಶಕ್ತಿಶಾಲಿ ಮಾಡಲು ನಾವು ಫಣ ತೊಟ್ಟಿದ್ದೇವೆ ನುಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೊಟ್ರಪ್ಪ, ಮೆಹಬೂಬ್, ಮಲ್ಲೇಶ್ ದೇವರಮನಿ, ಶರಣಪ್ಪ ತಂಬ್ರಳ್ಳಿ, ಭಿಮಣ್ಣ ಭಜಂತ್ರಿ, ಮಹೆಬೂಬ್ ಪಾಶಾ ಹಾಗು ಹುಲುಗಪ್ಪ ಭಜಂತ್ರಿ ಇತರರಿದ್ದರು.