A massive meeting of activists today for Harishankere Corporation Board

ಗಂಗಾವತಿ: ನಗರದ ಎಸ್‌ಎಸ್‌ಎಲ್‌ಆರ್ ಖಾಸಗಿ ಹೋಟೇಲ್ ಹಾಲ್‌ನಲ್ಲಿ ಅಗಷ್ಟ್ ೦೭ ಬೆಳಗ್ಗೆ ೧೧.೩೦ ಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗು ನಗರಸಭಾ ಸದಸ್ಯ ಶಾಮೀದ್ ಮನಿಯಾರ್ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರು ಒಳಬಳ್ಳಾರಿ ಹನುಮಂತಪ್ಪ ಹರಿಷಣಕೆರಿಗೆ ನಿಗಮ ಮಂಡಳಿ ನೀಡುವಂತೆ ಒತ್ತಾಯಿಸಿ ಬೃಹತ್ ಸಭೆ ಆಯೋಜಿಸಿದ್ದಾರೆ.
ನೂರೈವತ್ತಕ್ಕು ಹೆಚ್ಚು ಕಾರ್ಯಕರ್ತರು ಒಟ್ಟಾಗಿ ಸೇರಿ ಹರಿಷಣಕೇರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತೆರಳಿ ಒತ್ತಾಯಿಸುವ ಕುರಿತಂತೆ ರೂಪರೇಷ ಸಿದ್ಧಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Kalyanasiri Kannada News Live 24×7 | News Karnataka
