Breaking News

ಕಲ್ಯಾಣ ಕರ್ನಾಟಕ ಭಾಗಕ್ಕೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ : ಗಂಗಾಧರ ಗೌಡ ಪಾಟೀಲ್ ನವಲಿ

Give Chairmanship of Veerashaiva Lingayat Development Corporation to Kalyan Karnataka Part : Gangadhar Gowda Patil Navali


ಕನಕಗಿರಿ : ಕಾಂಗ್ರೆಸ್ ಸರಕಾರ ರಚನೆಯಾದಗಿಂದ ಇದುವರೆಗೂ ನಿಗಮಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲಾ ಇದರಿಂದ ದಿನದಿಂದ ದಿನಕ್ಕೆ ಸಚಿವರ ಹಾಗೂ ಕಾಂಗ್ರೇಸ್ ಕಟ್ಟಾಳುಗಳಲ್ಲಿ ನಿಗಮ ಸ್ಥಾನಗಳ ಅಧ್ಯಕ್ಷರ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆ ಅದರಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಿಗಿಯವರ ಅತಿ ಆಪ್ತರು ಹಾಗೂ ಕಾಂಗ್ರೇಸ್ ಪಕ್ಷದ ಯುವ ಕಟ್ಟಾಳು ಹಾಗೂ ಮತ್ತು ರೆಡ್ಡಿ ಸಮುದಾಯದ ಪ್ರಬಲ ಮುಖಂಡರಾದ ಗಂಗಾಧರ ಗೌಡ ಪಾಟೀಲ್ ನವಲಿ ಇವರನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಸೂಚಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಾಂತಾಗುತ್ತದೆ ಎಂಬುದು ಈ ಭಾಗದವರ ಅಭಿಪ್ರಾಯವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಅನೇಕ ಪಂಗಡಗಳ ಕುರಿತಾದ ಮಾಹಿತಿಯಿರುವ ಮತ್ತು ಆ ಸಮುದಾಯಗಳ ಅಭಿವೃದ್ದಿಗೆ ಬೇಕಾದ ಯೋಜನೆಗಳನ್ನು ರೂಪಿಸುವ ಹಾಗೂ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಬಲರನ್ನಾಗಿ ಮೇಲೆತ್ತುವ ಆಲೋಚನೆಯುಳ್ಳ ಒಬ್ಬ ಸೂಕ್ತ ವ್ಯಕ್ತಿಎಂದರೆ ಅದು ಗಂಗಾಧರ ಗೌಡ ಪಾಟೀಲ್ ನವಲಿಯಾಗಿದ್ದು ಇವರ ಕುರಿತು ಈ ಭಾಗದ ವೀರಶೈವ ಲಿಂಗಾಯತ ಸಮುದಾಯದವರು ಸಚಿವರ ಮುಂದೆ ಪ್ರಸ್ಥಾಪ ಸಲ್ಲಿಸಲಿದ್ದು. ಮುಂದೆ ಕಾರ್ಯಗತಗೊಳ್ಳುತ್ತಾ ಕಾದು ನೋಡಬೇಕಿದೆ.

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.