Breaking News

ಮಾದಪ್ಪನ ಸನ್ನಿದಿಯಲ್ಲಿ ನಡೆಯುವಕಾಮಗಾರಿಗಳನ್ನು ಅಧಿಕಾರಿಗಳ ಜೊತೆಯಲ್ಲಿ ವಿಕ್ಷೀಸಿದ ಶಾಸಕ ಎಮ್ ಆರ್ ಮಂಜುನಾಥ್

MLA M.R. Manjunath, along with the officials, inspected the works in the vicinity of Madappa.





ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮಾದಪ್ಪನ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವಂತೆ ಶಾಸಕರಾದ ಶ್ರೀ ಎಂ ಆರ್ ಮಂಜುನಾಥ್ ಸೂಚನೆ ನೀಡಿದರು .
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿವ ಮಾತನಾಡಿದ ಅವರು
ರಾಜ್ಯದ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟವು ಈಗಾಗಲೆ ಪ್ರಸಿದ್ಧಿ ಪಡೆದಿದೆ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು .ಅಲ್ಲದೆ 108 ಅಡಿ ಎತ್ತರದ ಮಹದೇಶ್ವರನ ವಿಗ್ರಹವು ಉದ್ಘಾಟನೆಗೊಂಡು ಹಲವಾರು ತಿಂಗಳುಗಳ ಕಳೆದಿದೆ ಆದರೆ ಉಳಿದಿರುವ ಕಾಮಗಾರಿಗಳಿಂದಾಗಿ ಮಾ ಬೆಟ್ಟಕ್ಕೆ ಬರುವ ಭಕ್ತರಿಗೆ ವೀಕ್ಷಣೆ ಮಾಡಲು ಅವಕಾಶ ಇಲ್ಲದೆ ಇರುವುದರಿಂದ ಕೂಡಲೇ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಭಕ್ತರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ನಂತರ 512 ಸಂಖ್ಯೆಗಳ ಕೊಠಡಿಗಳ ಕಾಮಗಾರಿಯನ್ನು ಸಹ ಪರಿಶೀಲನೆ ನಡೆಸಿ ರಾಜ್ಯದ ನಾನಾ ಭಾಗಗಳಿಂದ ಜಾತ್ರೆ ಹಾಗೂ ವಿಶೇಷ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಬಂದು ಹೋಗುವ ಸ್ಥಳದಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ನಂತರ ದರ್ಶನದ ಸಾಲಿನ ಕಾಮಗಾರಿ ಕೊಠಡಿಯನ್ನು ಸಹ ಪರಿಶೀಲನೆ ನಡೆಸಿ ವಿಕ್ಷೀಸಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ವಿಶ್ರಾಂತಿ ಪಡೆದು ಮಾದಪ್ಪನ ದರ್ಶನ ಪಡೆಯಲು ಭಕ್ತರ ಅನುಕೂಲಕ್ಕಾಗಿ ಮಾಡುತ್ತಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಅನ್ನ ಸಂತರ್ಪಣಾ ಕೊಠಡಿಗೂ ಸಹ ಬೇಟಿ ನೀಡಿ ಪರಿಶೀಲಿಸಿದರು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ವೀಕ್ಷಣೆಯನ್ನು ಸಹ ಮಾಡುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಕ್ರಮ ಕೈಗೊಳ್ಳಬೇಕು ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನದ ಹಿಂಭಾಗ ಇರುವ ಪ್ಲಾಸ್ಟಿಕ್ ಅನ್ನು ಮುಕ್ತಗೊಳಿಸಿ ಸ್ವಚ್ಛತೆಗೊಳಿಸುವಂತೆ ತಿಳಿಸಿದರು‌. ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಸಹ ಇದೇ ಸಂದರ್ಭದಲ್ಲಿ ಹಾಜರಿದ್ದು ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ ಮಲೆ ಮಾದೇಶ್ವರನ ಬೆಟ್ಟಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನಡೆಯುತ್ತಿರುವ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸ್ಥಳದಲ್ಲಿದ್ದ ಅಧಿಕಾರಿ ವರ್ಗದವರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಗೀತಾ ಹುಡೇದ್. ಸಾಲೂರು ಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ. ಇಂಜನೀಯರ್ ಗಳಾದ ಸೆಲ್ವ ಗಣಪತಿ. ಕುಮಾರ್ ಸೇರಿದಂತೆ ದೇವಾಲಯದ ಸಿಬ್ಬಂದಿ ವರ್ಗ ಹಾಜರಿದ್ದರು.

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.