Youth Moment protests against Manipur Maravani
ಗಂಗಾವತಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಅಮಾನವೀಯ ಕೃತ್ಯಕ್ಕೆ ಕಠಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸೊಲಿಡೋರಿಟಿ ಯೂಥ್ ಮುಮೆಂಟ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ. ಮಿನಿವಿಧಾನ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.
ಇತ್ತೀಚಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು, ಅರಾಜಕತೆ ನಿರ್ಮಾಣವಾಗುತ್ತಿದೆ ಜಾತಿಮತ ಎಣಿಸದೆ ಇಂತ ಹೀನ ಕೆಲಸ ಮಾಡಿದವರಿಗೆ ಉಗ್ರ ಶಿಕ್ಷೆಗೆ ಗುರಿಪಡಿಸಬೇಕಿದೆ. ದೇಶದ ಮಾನ ವಿದೇಶಗಳಲ್ಲಿ ಹರಾಜಾಗಿದೆ ದೇಶದ ಉನ್ನತ ಹುದ್ದೆಯಲ್ಲಿರುವ ಜನಪ್ರತಿನಿಧಿಗಳು ಕಾನೂನು ಕ್ರಮ ಬಿಗಿಗೊಳಿಸಬೇಕು. ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ಕಲ್ಪಿಸಬೇಕೆಂದು ಯುಥ್ ಅಧ್ಯಕ್ಷ ನಾಸೀರ್ ಆಹ್ಮದ್ ಹೇಳಿದರು.
ಪ್ರತಿಭಟನೆಯಲ್ಲಿ ರಾಜು ಮಡಿಕಲ್, ಆಸೀಫ್ ಮೆಡಿಕಲ್, ತಾಜುದ್ದೀನ್, ನಗರಸಭೆ ಮಾಜಿ ಸದಸ್ಯ ಯೂಸೂಫ್, ಆರ್.ಕೆ.ರೀಯಾಜ್, ಮಹ್ಮದ್ ರಫೀಕ್ ಗುಜರಿ, ತೌಫೀಕ್ ಆಹ್ಮದ್, ಸೊಹೇಲ್ ವಕೀಲರು ಹಾಗು ಮಹ್ಮದ್ ಅಮನ್ ಇತರರಿದ್ದರು.