Hiresindogi Karnataka Public School High School Section Welcome ceremony for Shilpa Chitragara
ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕರಾದ ಶಿಲ್ಪಾ ಚಿತ್ರಗಾರ ಅವರಿಗೆ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಅವರು ನೀರಲಗಿ ಸರಕಾರಿ ಪ್ರೌಢಶಾಲೆಯಿಂದ ವರ್ಗಾವಣೆಗೊಂಡು ಹಿರೇಸಿಂದೋಗಿಗೆ ಬಂದು ಸೇರಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಶಿಲ್ಪಾ ಚಿತ್ರಗಾರ ಅವರಿಗೆ ಲೆಕ್ಕಣಿಕೆ ನೀಡುವುದರ ಮೂಲಕ ಸ್ವಾಗತಿಸಿದರು. ಉಪ ಪ್ರಾಚಾರ್ಯರಾದ ನಾಗರಾಜ ಸುನಗ, ಶಿಕ್ಷಕರಾದ ಶೋಭಾ ವೇದ ಪಾಠಕ, ಪವಿತ್ರ ವೈದ್ಯ, ಚಾರುಲತಾ ಹೊನಕಳಸೆ, ರೇಣುಕಾ ಮಣ್ಣೂರು, ಭಾಗೀರಥಿ ಯಲ್ಲನಗೌಡರ, ಸುನಿತಾ ಚಕ್ಕಡಿ, ಕೃಷ್ಣ ಚಿತ್ರಗಾರ, ಚೆನ್ನಮ್ಮ ಹಲವಾಗಲಿ, ಮರಿಸ್ವಾಮಿ ಪೂಜಾರ, ಯಲ್ಲಮ್ಮ ಮಳಗಿ, ನಿಸರ್ಗ ಎಂ. ಲಿಂಗಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಫೋಟೋ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗಕ್ಕೆ ವರ್ಗಾವಣೆಗೊಂಡು ಬಂದು ಸೇವೆಗೆ ಸೇರಿರುವ ಶಿಲ್ಪಾ ಚಿತ್ರಗಾರ ಅವರಿಗೆ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಲೆಕ್ಕಣಿಕೆ ನೀಡುವುದರ ಮೂಲಕ ಸ್ವಾಗತಿಸಿದರು.