Breaking News

ತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿ ಅಧ್ಯಕ್ಷರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಒತ್ತಾಯ.

Demand to appoint Tungabhadra Save Movement Committee President as KADA President.

ಗಂಗಾವತಿ: ತುಂಗಭದ್ರಾ ಜಲಾಶಯದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯ ಅಧ್ಯಕ್ಷರಾದ ಎಂ.ಆರ್. ವೆಂಕಟೇಶ ಇವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಿಸಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿಯವರಿಗೆ ಮನವಿ ಸಲ್ಲಿಸಲಾಯಿತು ಎಂದು ಸಮಿತಿಯ ಗೌರವಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು


ಇಪ್ಪತ್ತು ವರ್ಷಗಳಿಂದ ತುಂಗಭಧ್ರಾ ಜಲಾಶಯದ ಬಗ್ಗೆ ಹೋರಾಟ ಮಾಡುತ್ತಿರುವ ಎಂ.ಆರ್. ವೆಂಕಟೇಶ ಅವರು ಕಾಡಾ ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿಯಾಗಿದ್ದಾರೆ. ಬಳ್ಳಾರಿ, ವಿಜಯನಗರ, ರಾಯಚೂರು ಹಾಗೂ ಕೊಪ್ಪಳ ಕಾಂಗ್ರೆಸ್ ಪಕ್ಷದ ಶಾಸಕರು ಇವರನ್ನು ಬೆಂಬಲಿಸಿ ಮುಖ್ಯಮಂತ್ರಿಗಳಿಗೆ ಬರೆಯಲು ಕೇಳಿಕೊಳ್ಳುತ್ತೇವೆ. ಈ ವಿಷಯದಲ್ಲಿ ನಾಲ್ಕು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಎಲ್ಲರನ್ನೂ ಭೇಟಿಯಾಗಿ ಎಂ.ಆರ್. ವೆಂಕಟೇಶ ಇವರಿಗೆ ತುಂಗಭಧ್ರಾ ಜಲಾಶಯದ ಬಗ್ಗೆ ಇರುವ ಮಾಹಿತಿ, ಅನುಭವಗಳನ್ನು ತಿಳಿಸಲಾಗುವುದು.
ಮುಂದಿನ ೨-೩ ದಿನಗಳಲ್ಲಿ ನಾಲ್ಕು ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಎಂ.ಆರ್. ವೆಂಕಟೇಶ ಇವರನ್ನು ಕಾಡಾ ಅಧ್ಯಕ್ಷರನ್ನಾಗಿಸಲು ಮನವಿ ಮಾಡಲಾಗುವುದು.
ಕಾಡಾ ಅಭಿವೃದ್ಧಿಯಾಗಬೇಕಾದರೆ ಎಂ.ಆರ್. ವೆಂಕಟೇಶರವರAತಹ ಅನುಭವದ ವ್ಯಕ್ತಿ ಬೇಕಾಗಿದೆ. ತುಂಗಭಧ್ರಾ ಉಳಿಸಿ ಆಂದೋಲನ ಸಮಿತಿ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.

About Mallikarjun

Check Also

screenshot 2025 08 30 17 12 16 40 e307a3f9df9f380ebaf106e1dc980bb6.jpg

ಗಂಗಾವತಿ: ಡಿವೈಎಸ್ಪಿ ಪಾಟೀಲರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ

Gangavathi: DySP Patil awarded Rashtrapati's Distinguished Service Medal ಗಂಗಾವತಿ: ಕಳೆದ ಎರಡು ವರ್ಷಗಳಿಂದ ಅತಿ ಸೂಕ್ಷ್ಮ ಪ್ರದೇಶ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.