Breaking News

38 ನೇ ರಾಜ್ಯ ಮಟ್ಟದ ಟೇಕ್ವಾಂಡೋಪಂದ್ಯಾವಳಿ:ಬೆಂಗಳೂರು,ತುಮಕೂರು, ಬೆಳಗಾವಿಗೆ ಹಾಗೂ ಚಿತ್ರದುರ್ಗಕ್ಕೆ ಅಗ್ರ ಸ್ಥಾನ

38th State Level Taekwondo Tournament: Bangalore, Tumkur, Belgaum and Chitradurga top position


ಬೆಂಗಳೂರು, ಜು, 25; ಚಿತ್ರದುರ್ಗದಲ್ಲಿ ಕರ್ನಾಟಕ ಟೇಕ್ವಾಂಡೋ ಅಸೋಸಿಯೇಷನ್ ನ 38ನೇ ರಾಜ್ಯ ಮಟ್ಟದ ಸಬ್‌ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ಟೇಕ್ವಾಂಡೋ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಜಾಹೀರಾತು

ಚಿತ್ರದರ್ಗದ ಕೆಇಬಿ ಸಮುದಾಯ ಭವನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಬ್‌ಜ್ಯೂನಿಯರ್ ವಿಭಾಗದಲ್ಲಿ ಬೆಂಗಳೂರು ನಗರ ಟೇಕ್ವಾಂಡೋ ಅಸೋಸಿಯೇಷನ್ [186 ಅಂಕಗಳು] ಮತ್ತು ಚಿತ್ರದುರ್ಗ ಜಿಲ್ಲಾ ಟೇಕ್ವಾಂಡೋ ಅಸೋಸಿಯೇಷನ್ [114 ಅಂಕಗಳು] ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿವೆ.

ಕೆಡೆಟ್ ವಿಭಾಗದಲ್ಲಿ ಬೆಂಗಳೂರು ನಗರ ಟೇಕ್ವಾಂಡೋ ಅಸೋಸಿಯೇಷನ್ [81 ಅಂಕಗಳು] ಮತ್ತು ತುಮಕೂರು ಜಿಲ್ಲಾ ಟೇಕ್ವಾಂಡೋ ಅಸೋಸಿಯೇಷನ್ [40 ಅಂಕಗಳು] ಪ್ರಶಸ್ತಿಗೆ ಭಾಜನವಾಗಿದ್ದು, ಜ್ಯೂನಿಯರ್ ವಿಭಾಗದಲ್ಲಿ ಬೆಳಗಾವಿ ಟೇಕ್ವಾಂಡೋ ಫೌಂಡೇಷನ್ [46 ಅಂಕಗಳು] ಮತ್ತು ಬೆಂಗಳೂರು ನಗರ ಟೇಕ್ವಾಂಡೋ ಅಸೋಸಿಯೇಷನ್ [28 ಅಂಕಗಳು] ತಂಡಗಳು ಪ್ರಶಸ್ತಿಗಳನ್ನು ಗಳಿಸಿವೆ.

ಹಿರಿಯರ ವಿಭಾಗದಲ್ಲಿ ತುಮಕೂರು ಜಿಲ್ಲಾ ಟೇಕ್ವಾಂಡೋ ಅಸೋಸಿಯೇಷನ್ [36 ಅಂಕಗಳು] ಮತ್ತು ಬೆಂಗಳೂರು ನಗರದ ಟೇಕ್ವಾಂಡೋ ಅಸೋಸಿಯೇಷನ್ [23 ಅಂಕಗಳು] ಪ್ರಶಸ್ತಿ ಪಡೆದಿವೆ ಎಂದು ಕರ್ನಾಟಕ ಟೇಕ್ವಾಂಡೋ ಅಸೋಸಿಯಷೇನ್ ಅಧ್ಯಕ್ಷ ತಿರುಮಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎನ್. ವೆಂಕಟೇಶ್ ತಿಳಿಸಿದ್ದಾರೆ.

ರಾಜ್ಯದ 18 ಜಿಲ್ಲೆಗಳಿಂದ ಸುಮಾರು 1000 ಕ್ರೀಡಾ ಪಟುಗಳು ಭಾಗವಹಿಸಿದ್ದರು. ಈ ಪಂದ್ಯವಳಿಗೆ ಆಂಧ್ರ, ಗೋವಾ, ತಮಿಳುನಾಡು ಮತ್ತು ಕರ್ನಾಟಕ ದಿ೦ದ ತೀರ್ಪುಗಾರರನ್ನು ಕರೆಸಲಾಗಿತ್ತು. ಬಾಲಕ ಮತ್ತು ಬಾಲಕಿಯರಿಗೆ ಅಂದರೆ 8 ವರ್ಷ ಮೇಲ್ಪಟ್ಟು ಹಾಗೂ 17 ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆಗಳು ಪ್ರತ್ಯೇಕವಾಗಿ ನಡೆಯಿತು.

About Mallikarjun

Check Also

ಉಪ ಲೋಕಾಯುಕ್ತರಿಂದ ಅ.30, 31 ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

Public inquiry reception program by the Deputy Lokayukta on October 30th and 31st ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.