Pension Adalat from the revenue department in the village again
ಗಂಗಾವತಿ: ತಾಲೂಕಿನ ಮರಳಿ ಗ್ರಾಮದ ಒಂದನೇ ವಾರ್ಡಿನ ಶ್ರೀ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜಂಬಣ್ಣ ಹಾಗೂ ತಹಸೀಲ್ದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದಲ್ಲಿ ಅನೇಕ ವಿಧವೆಯರು, ಅಂಗವಿಕಲರು, ವೃದ್ಧಾಪ್ಯ ವೇತನ ಪಡೆಯಲು ಅರ್ಹರಿರುವ ಫಲಾನುಭವಿಗಳಿಗೆ ಮಾಸಿಕ ಮಾಶಾಸನ ಮಂಜೂರಾತಿ ಆದೇಶ ಪತ್ರವನ್ನು ತಹಸಿಲ್ದಾರ್ ಅವರು ನೀಡಿದರು.
ಈ ಪಿಂಚಣಿ ಅದಾಲತ್ ಜೊತೆಗೆ ಗೃಹಲಕ್ಷ್ಮಿ ಯೋಜನೆ ಬೆಳೆ ಪರಿಹಾರ ಸ್ಮಶಾನ ಅಭಿವೃದ್ಧಿ ಭೂಮಿಯ ನಕ್ಷೆ, ಕಸ ವಿಲೇವಾರಿಗೆ ಭೂಮಿ ಗುರುತಿಸುವ ಹಾಗೂ ನೀರಿನ ಟ್ಯಾಂಕ್ ಗೆ ಸ್ಥಳಾವಕಾಶ ದ ಬಗ್ಗೆ ಮಾಹಿತಿ ನೀಡಿದರು.
ಈ ಸಮಾರಂಭದಲ್ಲಿ ನಾಡ ತಹಸಿಲ್ದಾರ್ ಮೆಹಬೂಬ್ ಅಲಿ, ಕಂದಾಯ ನಿರೀಕ್ಷಕ ಹಾಲೇಶ್, ಗ್ರಾಮ ಲೆಕ್ಕಾಧಿಕಾರಿ ನಾಗಬಿಂದು, ರಮೇಶ್ ಕುಲಕರ್ಣಿ, ಜಂಬಣ್ಣ ತಾಳೂರು, ಮೌಲಾಸಾಬ, ಯಮನೂರಪ್ಪ ಚಲುವಾದಿ ಮತ್ತು ಅನೇಕ ಫಲಾನುಭವಿಗಳು ಭಾಗವಹಿಸಿ ಗ್ರಾಮದ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.