Son of a retired soldier, Manjunath of Kannada medium passed the CA exam.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿಗಳಾದ ನಿವೃತ್ತ ಸೈನಿಕರು ಮತ್ತು ನಿವೃತ್ತ ಶಿಕ್ಷಕರಾದ ಚಂದ್ರಶೇಖರ್.ಎಂ.ಮಠದ ಮತ್ತು ನಿವೃತ್ತ ಶಿರಸ್ತೆದಾರರಾದ ಕೊಟ್ರಮ್ಮ ಕೆ.ಎಮ್.ಇವರ ಪುತ್ರ ಮಂಜುನಾಥ ಸಿ.ಮಠದ, ಸಿ.ಎ.ಪರೀಕ್ಷೆಯಲ್ಲಿ ಉತ್ತೀರಣರಾಗಿದ್ದಾರೆ.
ಅಭಿನಂದನಾರ್ಹರಾದ ಮಂಜುನಾಥ ತಮ್ಮ ಪ್ರಾಥಮಿಕ ಮತ್ತು ಪ್ರೌಡ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಮುಗಿಸಿದ್ದಾರೆಂಬುದು ವಿಷೇಶ.
1 ರಿಂದ 7 ನೇ ತರಗತಿಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳಪೇಟೆ ಹರಪನಹಳ್ಳಿ ,8 ನೇ ತರಗತಿಯನ್ನು ರಾಷ್ಟ್ರೋತ್ಥಾನ ಪ್ರೌಡ ಶಾಲೆ ಹಗರಿಬೊಮ್ಮನಹಳ್ಳಿ ಮತ್ತು 9-10 ನೇ ತರಗತಿಯನ್ನು ಹರಪನಹಳ್ಳಿಯ ಕೆ.ಸಿ.ಎ ಕನ್ನಡ ಮಾದ್ಯಮ ಪ್ರೌಡ ಶಾಲೆಯಲ್ಲಿ ಪೂರ್ಣ ಗೊಳಿಸಿದ್ದಾರೆ.
ಹರಪನಹಳ್ಳಿಯ ಎಸ್. ಎಸ್. ಹೆಚ್.ಜೈನ್ ಪದವಿಪೂರ್ವ ವಿದ್ಯಾಲಯದಲ್ಲಿ ಬಿ.ಕಾ೦ ಅಭ್ಯಾಸ ಮಾಡಿ,ಸಿ.ಎ.ಪದವೀಧರರಾದ ಜಿ.ನಂಜನಗೌಡ ಅವರ ಮಾರ್ಗದರ್ಶನದಲ್ಲಿ ಇದೇ ವರ್ಷದ ಮೇ ತಿಂಗಳು ನಡೆದ ಅಂತಿಮ ಪರೀಕ್ಷೆಯಲ್ಲಿ ಸಿ.ಎ.ಪದವಿಯನ್ನು ಪಡೆದು,ಗೌರವಕ್ಕೆ ಪಾತ್ರರಾಗಿದ್ದಾರೆ.
ಮಂಜುನಾಥ ಅವರ ಈ ಸಾಧನೆಗೆ ಅವರ ಸಹೋದರಿಯರಾದ ಶ್ರೀಮತಿ ಚೇತನಾ,ಡಾ.ಸಹನಾ ಸಂತಸ ವ್ಯಕ್ತಪಡಿಸಿದ್ದು, ಹಗರಿಬೊಮ್ಮನಹಳ್ಳಿಯ ಖ್ಯಾತ ವೈಧ್ಯರಾದ ಡಾ.ಕರಿಬಸಯ್ಯ ಎ.ಎಮ್.ಎ.ಮತ್ತು ಅವರ ಕುಟುಂಬ ವರ್ಗ ಹಾಗೂ ಸಹ ಪಾಟಿಗಳು ಅಭಿನಂದಿಸಿದ್ದಾರೆ.