: ಆರೋಗ್ಯ ಕೇಂದ್ರ ಹಾಗು ಯುವಜನ ಕೌಶಲ್ಯ ತರಬೇತಿ ಕೇಂದ್ರದ ವಿನೂತನ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ
ಸಾಮಾಜಿಕ ಸ್ವಾಸ್ಥ್ಯಕ್ಕೆ ಶಿಕ್ಷಣ, ಆರೋಗ್ಯ, ಉದ್ಯೋಗ ಈ ಎಲ್ಲವೂ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದು, ಸಮಾನತೆ ದೃಷ್ಟಿಯಿಂದ ಮಹಿಳಾ ಸಬಲೀಕರಣಕ್ಕಾಗಿ “ನಮ್ಮ ಆರೋಗ್ಯ ಕೇಂದ್ರ” ಹಾಗು ಯುವ ಜನತೆಯ ಆರ್ಥಿಕ ಸದೃಢತೆಗಾಗಿ “ಯುವಜನ ಸ್ಪಂದನ” ಕೌಶಲ್ಯ ತರಬೇತಿ ಕೇಂದ್ರದಂತಹ ವಿನೂತನ ಯೋಜನೆಗಳ ಮಹದಾಶಯದೊಂದಿಗೆ ಟೂಡಾ ಶಶಿಧರ್ ರವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಸುತ್ತಿದೆ ಕಲ್ಪತರು ನಾಡು ತಿಪಟೂರಿನ ಜನನಸ್ಪಂದನ ಟ್ರಸ್ಟ್.
ನಮ್ಮ ಯೋಜನೆಗಳ ಯಶಸ್ವಿ ನಿರ್ವಹಣೆಯ ಉದ್ದೇಶದಿಂದ ಜನಸ್ಪಂದನ ಟ್ರಸ್ಟ್, MJSPR ಸಂಸ್ಥೆಯ ಸಂಸ್ಥೆಯ ಖ್ಯಾತ ಪೊಲಿಟಿಕಲ್ ಸ್ಟ್ರ್ಯಾಟಜಿಸ್ಟ್ MJ ಶ್ರೀಕಾಂತ್ ರವರು ಹಾಗು ಖ್ಯಾತ ಪ್ರಸೂತಿ ತಜ್ಞರಾದ ಡಾ.ಹೇಮಾ ದಿವಾಕರ್ ಅವರ ಸಹಯೋಗದ ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಗಳನ್ನು ರೂಪಿಸಿದೆ.
ಮುಂದಿನ ದಿನಗಳಲ್ಲಿ ಈ ಯೋಜನೆಯ ರೂಪುರೇಷೆ ಆಶಯ ಹಾಗು ಸದುದ್ದೇಶಗಳನ್ನು ಸರ್ಕಾರದ ಗಮನಕ್ಕೆ ತರುವ ಚಿಂತನೆಗಳು ನಡೆದಿವೆ.
ಈ ನಿಟ್ಟಿನಲ್ಲಿ ಪ್ರಾರಂಭವಾದ ನಮ್ಮ ವಿಭಿನ್ನ ಯೋಜನೆಗಳಾದ “ನಮ್ಮ ಆರೋಗ್ಯ ಕೇಂದ್ರ ಹಾಗು ಕೌಶಲ್ಯ ತರಬೇತಿ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳುವಂತೆ ಜನತೆಗೆ ಮಾಹಿತಿ ತಿಳಿಸುವ ಸಲುವಾಗಿ ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರಾಜ್ಯ ಮಟ್ಟದ ಮಾಧ್ಯಮ ಹಬ್ಬದಲ್ಲಿ ಪಾಲ್ಗೊಳ್ಳಲಾಯಿತು.
ನಮ್ಮ ಮಹತ್ವಾಕಂಕ್ಷೆಯ ಯೋಜನೆಗಳಾದ ನಮ್ಮ ಆರೋಗ್ಯ ಕೇಂದ್ರ ಹಾಗು ಯುವ ಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರದ ಸದುದ್ದೇಶಗಳನ್ನು ಹಾಗು ಸೌಲಭ್ಯಗಳನ್ನು ತಿಳಿಸಲು ತುಮಕೂರಿನ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರಾಜ್ಯ ಮಟ್ಟದ ಮಾಧ್ಯಮ ಹಬ್ಬದಲ್ಲಿ ನಮ್ಮ
ಭಾಗವಹಿಸಿ ಯುವ ಜನತೆಗೆ ನಮ್ಮ ಸೌಲಭ್ಯಗಳು ಹಾಗು ಮಾಹಿತಿಗಳನ್ನು ತಿಳಿಸಿದರು.