
ಅಸ್ಮಿತಾ ರಾಜ್ಯ ಪೆಂಕಾಕ್ ಸಿಲತ್ ಕ್ರೀಡಾಕೂಟ
ಗೊಂಡಬಾಳ ಸಹೋದರಿಯರಿಗೆ ಟ್ಯಾಂಡಿಂಗ್ ಬಂಗಾರ ಪದಕ

Asmita State Pencak Silat Games
Gondabal sisters win gold medal
ಕೊಪ್ಪಳ: ಈಚೆಗೆ ಜಿಲ್ಲೆಯ ಹನುಮಸಾಗರದಲ್ಲಿ ಜರುಗಿದ ರಾಜ್ಯಮಟ್ಟದ ಖೇಲೋ ಇಂಡಿಯಾದ ಅಸ್ಮಿತಾ ಲೀಗ್ ಪೆಂಕಾಕ್ ಸಿಲತ್ ಕ್ರೀಡಾಕೂಟದಲ್ಲಿ ನಗರದ ನಿವಾಸಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮತ್ತು ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ ಅವರ ಸುಪುತ್ರಿಯರು ರಾಜ್ಯಮಟ್ಟದ ಪದಕ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ದ್ವಿತಿಯ ಪಿಯು ವಿಜ್ಞಾನ ವಿದ್ಯಾರ್ಥಿನಿ ಸಾಹಿತ್ಯ ಎಂ. ಗೊಂಡಬಾಳ ಮತ್ತು ಭಾಗ್ಯನಗರ ಪಯೋನಿಯರ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಅಕ್ಷರ ಎಂ. ಗೊಂಡಬಾಳ ಅವರು ಟ್ಯಾಂಡಿAಗ್ (ಸಿಲತ್ ರಿಯಲ್ ಫೈಟ್) ವಿಭಾಗದಲ್ಲಿ ಸೀನಿಯರ್ ಕೆಟಗರಿ (೬೩-೬೭ ಕೆಜಿ) ಸಾಹಿತ್ಯ ಎಂ. ಗೊಂಡಬಾಳ ಬಂಗಾರದ ಪದಕ ಪಡೆದರೆ, ಟೀನ್ ಕೆಟಗರಿ (೫೦-೫೪ ಕೆಜಿ) ಅಕ್ಷರ ಎಂ. ಗೊಂಡಬಾಳ ಬಂಗಾರದ ಪದಕ ಪಡೆದು ರಾಜ್ಯಮಟ್ಟದಲ್ಲಿ ಮಿಂಚಿದ್ದು, ಸೌತ್ ಝೋನ್ ಗೆ ಆಯ್ಕೆ ಆಗಿದ್ದಾರೆ.
ಇದೇ ವೇಳೆ ಪ್ರಿ-ಟೀನ್ ವಿಭಾಗದ (೨೨-೨೪ ಕೆಜಿ) ಟ್ಯಾಂಡಿAಗ್ ವಿಭಾಗದಲ್ಲಿ ವೇದಿಕಾ ಮೌನೇಶ ವಡ್ಡಟ್ಟಿ ಬಂಗಾರದ ಪದಕ ಮುಡಿಗೇರಿಸಿಕೊಂಡಳು.
ಈ ಸಂದರ್ಭದಲ್ಲಿ ಬಬಲಾದಿ ಮಠದ ಸಿದ್ದು ಮುತ್ಯಾ, ರಾಷ್ಟಿçÃಯ ಪೆಂಕಾಕ್ ಸಿಲತ್ ಫೆಡರೇಷನ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೈಲರ್, ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಮೌನೇಶ ವಡ್ಡಟ್ಟಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಬದಾಮಿ, ಬಿ. ಎಫ್. ಇಬ್ರಾಹಿಂ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ನಾಗರಾಜ ಗುಡ್ಲಾನೂರ, ರೇಣುಕಾ ಪುರದ ಇತರರು ಪದಕ ನೀಡಿ ಗೌರವಿಸಿದರು.




