
.

Tractor carrying bags of paddy overturns, driver survives, life in danger



ಭತ್ತದ ಚೀಲಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿ ಸಾಗಿಸುವ ಟ್ಯಾಕ್ಟರ್ ಪಲ್ಟಿ,ಚಾಲಕ ಪ್ರಾಣ ಅಪಾಯ ದಿನದ ಪಾರು
ಕಲ್ಯಾಣ ಸರಿ ಸುದ್ದಿ
ಗಂಗಾವತಿ: ಮಣ್ಣೂರು-ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಭತ್ತ ತುಂಬಿ ಸಾಗಿಸುವ ಟ್ಯಾಕ್ಟರ್ ಪಲ್ಟಿ ಯಾಗಿ ಚಾಲಕನಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀರಾಮನಗರದ ಹತ್ತಿರ ಶಿವರಾಮಕೃಷ್ಣ ಪೆಟ್ರೋಲ್ ಬ್ಯಾಂಕ್ ಹತ್ತಿರ ಬುಧವಾರ ಮಧ್ಯಾನ್ಹ ಜರುಗಿದೆ.
ಕಂಪ್ಲಿ ತಾಲೂಕಿನ ಮಣ್ಣೂರ ಸೂಗೂರಿನಿಂದ ಕಾರಟಗಿ ರೈಸ್ ಮಿಲ್ ಟ್ರಾಕ್ಟರ್ ನಲ್ಲಿ 15 ಟನ್ ಭತ್ತದ ಚೀಲಗಳನ್ನು ಸಾಗಿಸುವ ಸಂದರ್ಭದಲ್ಲಿ ಶ್ರೀರಾಮನಗರದ ಹತ್ತಿರ ಗಂಗಾವತಿ ರಾಯಚೂರು ಜಿಲ್ಲಾ ಹೆದ್ದಾರಿಯಲ್ಲಿ ಶಿವರಾಮ ಕೃಷ್ಣ ಪೆಟ್ರೋಲ್ ಬಂಕ್ ಹತ್ತಿರ ಟ್ರಾಲಿಯ ಲಿಂಕ್ ಕಟ್ ಆಗಿ ಏಕಾಏಕಿ ಟ್ರಾಲಿ ಪಲ್ಟಿಯಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಭತ್ತದ ಚೀಲಗಳು ರಸ್ತೆಯಲ್ಲಿ ಚಲ್ಲಾ ಪಿಲ್ಲಿಯಾಗಿದ್ದು ಈ ಸಂದರ್ಭದಲ್ಲಿ ವಾಹನಗಳ ಸಂಚಾರ ಇರದೇ ಇದ್ದ ಕಾರಣ ಭಾರಿ ಪ್ರಮಾಣದ ಅನಾವುತ ತಪ್ಪಿದೆ.
ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೀಡಿದ್ದಾರೆ.

