Breaking News

ಪ್ರಚಾರಕ್ಕಾಗಿ ಸಸಿ ನೆಡಬೇಡಿಮನುಕುಲಕ್ಕಾಗಿ ನೆಡಿ.ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕರಾದ ಖಾದರಸಾಬ್ ಹುಲ್ಲೂರು “ಅಕ್ಷರ-ಅನ್ನ, ಪರಿಸರ-ಚಿನ್ನ”

ಗಂಗಾವತಿ: ಇಂದು ಆನೆಗುಂದಿ ಮಹಿಳಾ ಶಕ್ತಿ ಕೇಂದ್ರದಲ್ಲಿ ಪರಿಸರ ಪ್ರೇಮಿ ಸಿಂಧೂ ಡಿ. ಜೊತೆ, ರಾಷ್ಟçಪ್ರಶಸ್ತಿ ವಿಜೇತ ಶಿಕ್ಷಕರಾದ ಖಾದರಸಾಬ ಹುಲ್ಲೂರು ರವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ನಾನು ಹಳೆ ಬೇರು ಆದರೆ, ಸಿಂಧೂ ಡಿ ಹೊಸ ಚಿಗುರು, ಸಿಂಧೂವಿನ ಜೊತೆ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಗುತ್ತಿದೆ. ಪ್ರತಿಯೊಬ್ಬರೂ ಮನುಕುಲ ಪ್ರಾಣಿ ಸಂಕುಲದ ಉಳಿವಿಗಾಗಿ ಸಸಿ ನೆಡಬೇಕಾಗಿದೆ. ಇಂತಹ ಪರಿಸರ ಕಾಳಜಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡಬೇಕು, ಪರಿಸರ ರಕ್ಷಿಸಬೇಕು. ಈಗಾಗಲೇ ಪರಿಸರದಲ್ಲಿ ತುಂಬಾ ಏರುಪೇರು ವಾತಾವರಣವಾಗಿದೆ. ಮಿತಿಮೀರಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮಳೆಗಾಲದಲ್ಲಿ ಮಳೆಯಿಲ್ಲ, ಹಾಗಾಗಿ ಸಸಿ ನೆಡುವುದು ಪ್ರಕೃತಿ ಉಳಿಸುವುದು ಒಂದೇ ಮಾರ್ಗವಾಗಿದೆ. ಆದ್ದರಿಂದ ನಾನು ಈಗಿನಿಂದಲೇ ಚಿಕ್ಕ ಮಕ್ಕಳಿಗೆ ಸಸಿ ನೆಡುವುದು, ಅದನ್ನು ರಕ್ಷಣೆ ಮಾಡುವುದರ ಬಗ್ಗೆ ಪ್ರಕೃತಿ ಉಳಿಸುವುದರ ಬಗ್ಗೆ ಹೇಳುವ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ. ಈಗ ಸಿಂಧೂ ನನಗೆ ಸಿಕ್ಕಿರುವುದು ತುಂಬಾ ಹೆಮ್ಮೆಯಾಗಿದೆ. “ರಾಮಕೃಷ್ಣ ಪರಮಹಂಸ”ರಿಗೆ ಸ್ವಾಮಿ ವಿವೇಕಾನಂದ ಸಿಕ್ಕಂತೆ ನನಗೆ ಸಿಂಧೂ ಡಿ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟೇಶ, ನರಸಿಂಹಲು ಹಾಗೂ ಗ್ರಾಮಸ್ಥರಾದ ಲಕ್ಷಿö್ಮÃ, ರುಕ್ಮಿಣಿ, ನಿಂಗಮ್ಮ, ದುರ್ಗಾ, ಜ್ಯೋತಿಕಾ, ಸರಸ್ವತಿ ಸೇರಿದಂತೆ ಇತರರು ಪ್ರೋತ್ಸಾಹ ನೀಡಿದರು.

About Mallikarjun

Check Also

ಎನ್.ಆರ್.ಕಾಲೋನಿಯ ಆಚಾರ್ಯ ಪಾಠಶಾಲಾದಲ್ಲಿ ವೈಭವದಿಂದ ಜರುಗಿದ ಸಮ್ಮಿಲನ ಕಾರ್ಯಕ್ರಮ

ಬೆಂಗಳೂರು, ಜೂ, 30; ಎಪಿಎಸ್ ಶೈಕ್ಷಣಿಕ ಟ್ರಸ್ಟ್ ನ ಎನ್.ಆರ್. ಕಾಲೋನಿಯ ಆಚಾರ್ಯ ಪಾಠಶಾಲಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.