ಬೆಂಗಳೂರು, ಮೇ, 28; ಹಾವೀರ ಲಲಿತಾಕಲಾ ಅಕಾಡೆಮಿಯ ಗುರು ವಿದುಷಿ ತನುಜಾ ಜೈನ್ ಅವರು ತಮ್ಮ ಶಿಷ್ಯೆ 15ರ ಹರೆಯದ ಕುಮಾರಿ ಸುನಿಧಿ ಮಂಜುನಾಥ್ ರಂಗ ಪ್ರವೇಶ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಮಹಾವೀರ ಲಲಿತಕಲಾ ಅಕಾಡೆಮಿ ಹಾಗೂ ಸುಮೇರು ಟ್ರಸ್ಟ್ ನ ಸಹಯೋಗದಲ್ಲಿ ನಡೆಯಿತು. ಕುಮಾರಿ ಸುನಿಧಿ 8ನೇ ವಯಸ್ಸಿಗೆ ಗುರುಗಳಲ್ಲಿ ನೃತ್ಯಾಭ್ಯಾಸ ಆರಂಭಿಸಿದರು. ಗುರುಗಳಾದ ವಿದುಷಿ ತನುಜಾರವರು ಆಗಸ್ಟ ಸೆಪೆಂಬರ್ ಹೊತ್ತಿಗೆ ರಂಗ ಪ್ರವೇಶ ಮಾಡುವ ಉದ್ದೇಶ ಹೊಂದಿದ್ದರು. ಕುಮಾರಿ ಸುನಿಧಿ ತನ್ನ ಪಿಯುಸಿಯನ್ನು ಕಾರ್ಕಳದಲ್ಲಿ ಮುಂದುವರೆಸುವ ಉದ್ದೇಶವಿರುವುದರಿಂದ ಮುಂಚೆಯೇ ರಂಗ ಪ್ರವೇಶ ಹಮ್ಮಿಕೊಳ್ಳಲಾಗಿತ್ತು.
ರಂಗ ಪ್ರವೇಶಕ್ಕೆ ಸುನಿಧಿಯ ತಯಾರಿ ಪರಿಶ್ರಮ ಶ್ರದ್ಧೆಯನ್ನು ಅವಳ ಗುರುಗಳು ಮುಕ್ತ ಕಂಠದಿಂದ ಹೊಗಳಿದರು. 2 ತಿಂಗಳಕಾಲದಲ್ಲಿ ಸುಮಾರು 5-6 ತಾಸುಗಳ ಸತತ ಅಭ್ಯಾಸದಿಂದ ಅದ್ಭುತವಾದ ನೃತ್ಯ ಪ್ರದರ್ಶನವನ್ನು ಸುನಿಧಿಯು ಮಾಡಿದಳು.
ಡಾ. ರೂಪಾ ಮಂಜುನಾಥ್ ಹಾಗೂ ಡಾ. ಮಂಜುನಾಥ್ ಪಾಳ್ಯ ಇವರ ಏಕೈಕ ಪುತ್ರಿಯಾಗಿರುವ ಕುಮಾರಿ ಸುನಿಧಿಯು ಬಹಳ ಸೌಮ್ಯ ಹಾಗೂ ಶಾಂತ ಸ್ವಭಾವದ ಹುಡುಗಿ. ತಂದೆ ಮತ್ತು ತಾಯಿಯರು ಉಪನ್ಯಾಸಕ ವೃತ್ತಿಯಲ್ಲಿರುವುದರಿಂದ ತಮ್ಮ ಅಜ್ಜ-ಜ್ಜಿಯ ಜೊತೆಗೆ ಹೆಚ್ಚು ಸಮಯ ಕಳೆಯುವುದರಿಂದ ಗುರುಹಿರಿಯರೊಂದಿಗೆ ವಿನಮ್ರ ಹಾಗೂ ಪ್ರೀತಿಯ ಸಂಬಂಧವನ್ನು ಹೊಂದಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ. ನರಹಳ್ಳಿ ಬಾಲ ಸುಬ್ರಮಣ್ಯ, ಮಹಾಬಲ ಮೂರ್ತಿ ಕೂಡ್ಲೇಕೆರೆ, ಡಾ.ಪ್ರಮೀಳಾ ಮಾಧವ್, ಡಾ. ಸುರೇಶ ಪಾಟೀಲ, ಡಾ. ಆಶಾದೇವಿ ಎಂ ಎಸ್, ಡಾ. ಕೆ. ಪಿ ಭಟ್, ಡಾ. ಸುಮಿತ್ರ ಎಂ, ಡಾ. ಸಿ.ಬಿ. ಹೊನ್ನುಸಿದ್ಧಾರ್ಥ, ಡಾ. ರಘುರಾಂ ಮೊದಲಾದ ಸಾಹಿತಿಗಳು, ಸುನಿಧಿಯ ಪೋಷಕರ ಗುರುಗಳು, ಹೀಗೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಹಲವಾರು ಕಾಲೇಜುಗಳ ಉಪನ್ಯಾಸಕರ ದೊಡ್ಡ ಬಳಗ, ಸಂಬಂಧಿಕರು ಉಪಸ್ಥಿತರಿದ್ದು ಹರಸಿದರು