Breaking News

ಯುವ ಚಾರಣ ಬಳಗದಿಂದ ಸ್ವಚ್ಚತಾ ಹಾಗೂ ಮತದಾನ ಜಾಗೃತಿ ಅಭಿಯಾನ

Cleanliness and voting awareness campaign by Yuva Charan Bala

ಜಾಹೀರಾತು

ಗಂಗಾವತಿ: ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಕಿಷ್ಕಿಂಧ ಯುವ ಚಾರಣ ಬಳಗ ಹಾಗೂ ಲಿವ್ ವಿತ್ ಹ್ಯೂಮನಿಟಿ ಟ್ರಸ್ಟ್ ವತಿಯಿಂದ ಇಂದು ಗಂಗಾವತಿ ತಾಲೂಕಿನ ಸಣಾಪುರ ಐತಿಹಾಸಿಕ ಕೆರೆಯ ದಂಡೆಯ ಸ್ವಚ್ಛತಾ ಅಭಿಯಾನ ನಡೆಸಿ, ನಂತರ ಮತದಾನ ಜಾಗೃತಿ ಮೂಡಿಸಲಾಯಿತು.
ಸ್ವಚ್ಚತಾ ಅಭಿಯಾನದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಆನೆಗೊಂದಿಯ ಸುದರ್ಶನ ವರ್ಮ, ಅರ್ಜುನ್ ಜಿ.ಆರ್, ಪ್ರಕಾಶ ಎಂ., ಪಂಪಾಪತಿ ಮುದಗಲ್, ಸೌಮ್ಯ ಶ್ಯಾವಿ, ಪ್ರಸನ್ನ ಮಿಶ್ರಕೋಟಿ, ಮಂಜುನಾಥ ಶ್ರೇಷ್ಠಿ, ಮಂಜುನಾಥ ಇಂಡಿ, ಹರ್ಷ, ಚನ್ನಪ್ಪ ಬಳ್ಳೊಳ್ಳಿ, ಆಕಾಶ ನಾಗಲೀಕರ್, ಚಿದಾನಂದ ಕೀರ್ತಿ ಇತರರು ಪಾಲ್ಗೊಂಡಿದ್ದರು.
ಸಾಣಾಪುರ ಕೆರೆಯ ದಂಡೆಯಲ್ಲಿ ಕುಡಿದು ಬೀಸಾಡಿದ ಮದ್ಯದ ಬಾಟಲ್‌ಗಳನ್ನು, ಪ್ಲಾಸ್ಟಿಕ್ ಬಾಟಲ್, ಇತರೆ ಪ್ಲಾಸ್ಟಿಕ್ ತಾಜ್ಯವನ್ನು ಸಂಗ್ರಹಿಸಲಾಯಿತು. ನಮ್ಮ ಭಾಗದ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳ ಪರಿಸರವನ್ನು ಕಾಪಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಕೆರೆಯ ದಂಡೆಯ ಮೇಲೆ ಮದ್ಯಪಾನ ಮಾಡಿ ಬಾಟಲ್‌ಗಳನ್ನು ಒಡೆದು ಹಾಕುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಕೆರೆಗೆ ಗಾರ್ಡ್ಗಳನ್ನು ನೇಮಿಸಬೇಕು ಹಾಗೂ ಅಲ್ಲಲ್ಲಿ ಡಸ್ಟಬಿನ್‌ಗಳನ್ನು ಇಡಬೇಕು.
ಪ್ರವಾಸಿಗರಿಗೆ ಸ್ವಚ್ಚತಾ ಅರಿವು ಮೂಡಿಸುವ ಬೋರ್ಡ್ಗಳನ್ನು ಹಾಕಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. ನಂತರ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ|| ಶಿವಕುಮಾರ್ ಮಾಲಿಪಾಟೀಲ ಮತದಾನ ಮಹತ್ವದ ಬಗ್ಗೆ ಮಾಹಿತಿ ನೀಡಿ, ಮತದಾನದ ಪ್ರತಿಜ್ಞಾವಿಧಿ ಭೋದಿಸಿ, ಮೇ-೭ ರ ಚುನಾವಣೆಗೆ ಎಲ್ಲರೂ ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಬೇಕೆಂದು ಮನವಿ ಮಾಡಿದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.