Breaking News

ಗಂಗಾವತಿ: ಕಟ್ಟಡ ಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ

Gangavati: Voting awareness march by construction workers

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ : ಇಲ್ಲಿನ ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘವು ,ತಾಲೂಕು ಸ್ವೀಪ್ ಸಮಿತಿ ,ಕಾರ್ಮಿಕ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಇಂದು ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಲೋಕಸಭಾ ಚುನಾವಣೆ ೨೦೨೪ ರ ಮತದಾನ ಜಾಗೃತಿ ಜಾಥಾ ನಡೆಸಿದರು.

ಶ್ರೀ ಚನ್ನಬಸವಸ್ವಾಮಿ ಮಠದ ಆವರಣದಿಂದ ಪ್ರಾರಂಭವಾದ ಜಾಥಾಕ್ಕೆ ಸ್ವೀಪ್ ಜಿಲ್ಲಾ ರಾಯಭಾರಿ ಡಾ.ಶಿವಕುಮಾರ್ ಮಾಲಿಪಾಟೀಲ ಚಾಲನೆ ನೀಡಿದರು. ಮಹಾತ್ಮ ಗಾಂಧಿ ವೃತ್ತ,ಬಸವಣ್ಣ ವೃತ್ತ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತ,ಬಸ್ ನಿಲ್ದಾಣದ ಮಾರ್ಗವಾಗಿ ಸಂಘಟನೆಯ ಕಚೇರಿಯವರೆಗೆ ಜಾಥಾ ಸಂಚರಿಸಿತು.

ಡೊಳ್ಳು ಬಾರಿಸುತ್ತಾ, ಮತದಾನ ಜಾಗೃತಿ ಘೋಷಣೆಗಳನ್ನು ಕೂಗುತ್ತಾ , ಫಲಕಗಳನ್ನು ಹಿಡಿದು ಸಾಗಿದ ಜಾಥಾವು, ಮೇ ೭ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕು,ಯಾವುದೇ ಆಮಿಷಗಳಿಗೆ,ಪ್ರಚೋದನೆಗೆ ಒಳಗಾಗದೇ ತಮ್ಮ ಇಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ,ಜಿಲ್ಲೆಯಲ್ಲಿ ಅತಿಹೆಚ್ಚು ಮತದಾನ ಪ್ರಮಾಣ ದಾಖಲಿಸಬೇಕು ಎಂದು ಜಾಥಾ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಸಂಘಟನೆಯ ಸಂಸ್ಥಾಪಕ ಹಾಗು ಕಲ್ಯಾಣ ಕರ್ನಾಟಕ ವಿಭಾಗೀಯ ಕಟ್ಟಡ ಕಾರ್ಮಿಕರ ಅಧ್ಯಕ್ಷ ಶಿವಕುಮಾರ್ ಗೌಡ, ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಇತರೆ ಪದಾಧಿಕಾರಿಗಳಾದ ರಾಮು, ವೀರೇಶ್, ಚಂದ್ರು, ಶ್ರೀನಿವಾಸ್, ಗಾದಿಲಿಂಗಪ್ಪ, ಹನುಮಂತಪ್ಪ, ಭೋಜರಾಜ್, ಬಸವರಾಜ್, ಶರಣಬಸವ, ಮಂಜುನಾಥ್, ವೀರಣ್ಣ, ಲಕ್ಷ÷್ಮಣ, ರಂಗಣ್ಣ, ಗೌಸ್, ಭೀಮೇಶ್,
ಕಾನೂನು ಸಲಹೆಗಾರ ಪ್ರಕಾಶ ಕುಸುಬಿ, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ,ಆರೋಗ್ಯ ನಿರೀಕ್ಷಕ ನಾಗರಾಜ, ಉದ್ಯಮಿ ಶರಣಬಸವರಾಜ ಎಸ್ ಗದಗ ಸೇರಿದಂತೆ, ಸಿಬ್ಬಂದಿ,ನೂರಾರು ಕಟ್ಟಡ ಕಾರ್ಮಿಕರು ಜಾಥಾದಲ್ಲಿ ಪಾ

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *