ಭಾವಿಯಲ್ಲಿ ಕಾಲು ಜಾರಿ ಬಿದ್ದಿರುವ ಅಡವಿ ನರಿ ಕಾಪಾಡಿದ ಅಥಣಿ ಅಗ್ನಿಶಾಮಕ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಯವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಅಡವಿ ನರಿಯು ಕಾಲು ಜಾರಿ ಸುಭಾಸ.ನಿಂಗಪ್ಪ.ಹನಗoಡಿ ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 19/04/2024 ರಂದು ಬೆಳಗಿನ ಜಾವ ಸಮಯ 09:00ಕ್ಕೆ ಶುಕ್ರವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಧಾಕ್ಷಣ ಸ್ಥಳಕ್ಕೆ ಜಲವಾಹನ ಮತ್ತು
ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ ಮಲ್ಲಿಕಾರ್ಜುನ .ಎಂ.ಬಂದಾಳ ಪ್ರಭಾರ ಪ್ರಮುಖ ಅಗ್ನಿಶಾಮಕ ರವರ ನೇತೃತ್ವದಲ್ಲಿ ಸಿಬ್ಬಂದಿಯವರು ಹಾಗು ಅರಣ್ಯ ಅಧಿಕಾರಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 55 ರಿಂದ 60 ಅಡಿ ಆಳದಲ್ಲಿ ಅಡವಿ ನರಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 01 ಗಂಟೆ 45 ನಿಮಿಷಗಳ ಕಾಲ ಕಷ್ಟಕರ ಜoಟಿ ಕಾರ್ಯಚರಣೆಯನ್ನು ಮಾಡಿ ಅಡವಿ ನರಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು. ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು01) ಮಲ್ಲಿಕಾರ್ಜುನ .ಎಂ.ಬಂದಾಳ 02) ಪ್ರಶಾಂತ ಚವಾಣ 03)ಶಿವಾನಂದ.ಪೂಜಾರಿ 04) ರವೀಂದ್ರ.ಸಂಗಮ 05) ಸಂತೋಷ್ ಚೌಗುಲಾ 06) ಸಚಿನ ಹಲ್ಯಾಳ ಅರಣ್ಯ ಇಲಾಖೆ ಸಿಬ್ಬಂದಿಯವರಾದ 01)ಅಶೋಕ.ದನವಡೆ. 02)ದತ್ತಾ.ಜಾಧವ. 03)ಮುರಗೇಶ.ಠಕ್ಕಣ್ಣವರ್ 04)ಅನಿಲ ಅವಳೆ 05)ಶ್ಯಾಮ.ಕಾಂಬಳೆ ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು.