Breaking News

ಚುನಾವಣಾ ಬಾಂಡ್ ಹಗರಣ:ಸುಪ್ರೀಂ ಸುಪರ್ಧಿಯಲ್ಲಿ ತನಿಖೆಗೆ ಆಗ್ರಹ


ಗಂಗಾವತಿ: ೨೦೧೮ ರಿಂದ ಆಡಳಿತಾರೂಢ ಬಿಜೆಪಿಯು ಸುಮಾರು ೮,೨೫೨ ಕೋಟಿರೂಗಳ ಚುನಾವಣಾ ಬಾಂಡ್ ಗಳನ್ನು ಪಡೆದಿದ್ದು ಮೇಲ್ನೋಟಕ್ಕೆ ಇದೊಂದು ಅಧಿಕಾರ ದುರುಪಯೋಗದ ಭ್ರಷ್ಠಾಚಾರದ ಪ್ರಕರಣವಾಗಿದ್ದು ಸುಪ್ರಿಂ ಕೋರ್ಟ ಸುಪರ್ಧಿಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿಯ ಮುಖಂಡರಾದ ಎಂ.ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ, ತಾನು ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ ಮಾತ್ರವಲ್ಲಾ ಕಪ್ಪು ಹಣ ಬಯಲಿಗೆಳೆಯುತ್ತೇನೆ ಎಂದು ನೀಡಿದ ವಾಗ್ದಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದನ್ನು ಈ ಹಗರಣ ಸಾಬೀತು ಪಡಿಸುತ್ತದೆ. ಈ ಚುನಾವಣಾ ಬಾಂಡ್ ಪ್ರಕರಣಗಳು ಈಗ ಒಂದೊAದಾಗಿ ಮಾದ್ಯಮಗಳಲ್ಲಿ ಬಯಲಾಗುತ್ತಿವೆ. ಇವು ಸರಕಾರದ ಅಧಿಕಾರ ದುರುಪಯೋಗ, ಭ್ರಷ್ಠಾಚಾರ, ಸ್ಯಯತ್ತ ಸಂಸ್ಥೆಗಳ ದುರ್ಬಳಕೆ, ಬ್ಲಾಕ್ ಮೇಲ್ ಅಂಶಗಳನ್ನು ಅವು ಎತ್ತಿ ತೋರಿಸುತ್ತಿವೆ. ಬಿಜೆಪಿಗೆ ಚುನಾವಣಾ ಬಾಂಡ್ ನೀಡಿದ ಔಷಧಿ ಹಾಗೂ ಲಾಟರಿ ಮತ್ತಿತರೆ ಕಂಪನಿಗಳು, ಒಕ್ಕೂಟ ಸರಕಾರದ ಈ.ಡಿ, ಐ.ಟಿ. ಮುಂತಾದ ಸಂಸ್ಥೆಗಳಿAದ ದಾಳಿಗೊಳಗಾಗಿರುವುದು. ಅದೇ ರೀತಿ, ಹಲವು ಕಂಪನಿಗಳು ಚುನಾವಣಾ ಬಾಂಡ್ ನೀಡಿ ಲಾಭದಾಯಕ ಗುತ್ತಿಗೆಗಳನ್ನು ಪಡೆದಿರುವುದು ಕಂಡು ಬಂದಿದೆ. ಇದೆಲ್ಲವೂ ನರೇಂದ್ರ ಮೋದಿಯವರ ಸರಕಾರ ಭ್ರಷ್ಠಾಚಾರವನ್ನು ಈ ಮೂಲಕ ಕಾಯ್ದೆ ಬದ್ದ ಗೊಳಿಸಿರುವುದನ್ನು ಮತ್ತು ಗೌಪ್ಯವಾಗಿರಿಸಲು ಕ್ರಮವಹಿಸಿರುವುದನ್ನು ಬಯಲುಗೊಳಿಸುತ್ತದೆ. ಇದನ್ನು ಸುಪ್ರಿಂ ಕೋರ್ಟ ಸುಪರ್ಧಿಯಲ್ಲಿ ವಿವಿಧ ಆಯಾಮಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಿನ ಕ್ರಮವಹಿಸಬೇಕು. ಪಾರ್ಲಿಮೆಂಟ್ ಚುನಾವಣೆ ಘೋಷಣೆಯಾದ ನಂತರ ದೇಶದಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ದುರುದ್ದೇಶದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ರನ್ನು ಬಂಧಿಸಿರುವುದು ತೀವ್ರ ಖಂಡನೀಯವಾಗಿದೆ ಮತ್ತು ಈ ಕೂಡಲೆ ಅವರನ್ನು ಬಂಧ ಮುಕ್ತಗೊಳಿಸಲು ಒಕ್ಕೂಟ ಸರಕಾರವನ್ನು ಸಿಪಿಐಎಂ ಎಂದು ಆಗ್ರಹಿಸಿದ್ದಾರೆ.

About Mallikarjun

Check Also

ಆಸ್ತಿ ತೆರಿಗೆ ಕಡಿಮೆ ಮಾಡಲುವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳ ಮನವಿ.

ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗಕ್ಕೆ ನೂತನ ಕೈಗಾರಿಕಾ ನೀತಿ ಜಾರಿ ಮಾಡಲು ಮತ್ತು ಆಸ್ತಿ ತೆರಿಗೆ ಕಡಿಮೆ ಮಾಡಲು ಕಲಬುರ್ಗಿ ವಿಭಾಗ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.